ಹತ್ತು ವರ್ಷದ ಹಿಂದೆ ಪಡೆದಿದ್ದ ಸಾಲ ಹಿಂದಿರುಗಿಸಿಲ್ಲ, ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎನ್ನುವ ಕಾರಣಕ್ಕೆ ತಿಹಾರ್ ಜೈಲು ಸೇರಿದ್ದ ಹಿಂದಿ ನಟ ರಾಜ್ಪಾಲ್ ಯಾದವ್ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ಕಾರಣಕ್ಕಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊ ಹರಿದಾಡುತ್ತಿದೆ. ಅದರಲ್ಲಿ ಅವರು ನಟ ಸಲ್ಮಾನ್ ಖಾನ್ ಅವರನ್ನು ತನ್ನ ಹಿರಿಯ ಅಣ್ಣ ಎಂದು ಕರೆದಿದ್ದಾರೆ; ಚಲನಚಿತ್ರರಂಗದಲ್ಲಿ ಇರುವವರ ಪೈಕಿ ಇತರರಿಗೆ ಸಹಾಯ ಮಾಡುವಂಥವರು ಕೆಲವರು ಮಾತ್ರ ಎಂದು ಹೇಳಿದ್ದಾರೆ; ಈ ಮೂಲಕ ಸಲ್ಮಾನ್ ಖಾನ್ ಅವರು ನೀಡಿದ ನೆರವಿಗೆ ರಾಜ್ಪಾಲ್ ಯಾದವ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.‘

ವಿಡಿಯೊದ ಕೀಫ್ರೇಮ್ಗಳನ್ನು ಇನ್ವಿಡ್ ಸಾಧನದ ಮೂಲಕ ಪ್ರತ್ಯೇಕಿಸಿ, ಅವುಗಳಲ್ಲಿ ಒಂದು ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ವಿಶ್ಲೇಷಿಸಿದಾಗ, ಹಲವರು ಇದೇ ವಿಡಿಯೊ ಅನ್ನು ಹಂಚಿಕೊಂಡಿರುವುದು ಕಂಡಿತು. ಜತೆಗೆ, ‘ಮೂವೀಸ್ ಅಡ್ಡಾ’ ಎನ್ನುವ ಯೂ ಟ್ಯೂಬ್ ಚಾನೆಲ್ಗೆ ಸಂಪರ್ಕ ಕಲ್ಪಿಸಿತು. ಅದರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿರುವ ವಿಡಿಯೊವನ್ನೇ ಹೋಲುತ್ತಿತ್ತು. ಚಾನೆಲ್ನಲ್ಲಿ ಉಲ್ಲೇಖವಾಗಿರುವ ವಿವರಗಳನ್ನು ಪರಿಶೀಲಿಸಿದಾಗ, ವಿಡಿಯೊ ಅಪ್ಲೋಡ್ ಆಗಿರುವುದು 2018ರ ಏಪ್ರಿಲ್ನಲ್ಲಿ ಎಂದು ತಿಳಿಯಿತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಮಾನ್ ಖಾನ್ ಅವರು ಜಾಮೀನು ಪಡೆದ ಹೊರಬಂದ ಸಂದರ್ಭದಲ್ಲಿ ರಾಜ್ಪಾಲ್ ಯಾದವ್ ಅವರು ಖುಷಿಯಿಂದ ಪ್ರತಿಕ್ರಿಯಿಸಿದ್ದ ವಿಡಿಯೊ ಅದು. ರಾಜ್ಪಾಲ್ ಯಾದವ್ ಅವರು ಸಾಲದ ಸಂಬಂಧ ₹1.5 ಕೋಟಿ ಜಮೆ ಮಾಡಿದ್ದಾರೆ. ಜತೆಗೆ, ₹1 ಲಕ್ಷವನ್ನು ಭದ್ರತಾ ಠೇವಣೆಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿರುವುದು ಕಂಡಿತು. ಆರು ವರ್ಷಗಳ ಹಳೆಯ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.