ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

Last Updated 9 ಜನವರಿ 2020, 6:59 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ:ಜೆಎನ್‌ಯುನಲ್ಲಿ ಮುಸುಕುಧಾರಿಗಳು ದಾಂದಲೆ ನಡೆಸಿದ ಘಟನೆ ಖಂಡಿಸಿ ಭಾನುವಾರ ರಾತ್ರಿ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಜೆಎನ್‌ಯುನ ಹಳೆವಿದ್ಯಾರ್ಥಿ ಉಮರ್ ಖಾಲಿದ್ ನೇತೃತ್ವದಲ್ಲಿ ಮುಂಬೈನಲ್ಲಿ ಈ ಪ್ರತಿಭಟನೆ ನಡೆದಿತ್ತು.

ಪ್ರತಿಭಟನೆಯಲ್ಲಿ ಘೋಷಣೆ ಕೂಗುವಾಗ ಉಮರ್ ಖಾಲಿದ್ ಹಿಂದೂವೋಂಸೇ ಆಜಾದಿ (ಹಿಂದೂಗಳಿಂದ ಆಜಾದಿ) ಎಂದು ಕೂಗಿದ್ದಾರೆ ಎಂದು ಬಿಜೆಪಿ ದೆಹಲಿ ವಕ್ತಾರ ತಾಜಿಂದರ್ ಪಾಲ್ಸಿಂಗ್ಬಗ್ಗಾವಿಡಿಯೊ ತುಣುಕೊಂದನ್ನು ಟ್ವೀಟಿಸಿದ್ದಾರೆ.

ಜನವರಿ 6ರಂದು ಬೆಳಗ್ಗೆ 09.04ಕ್ಕೆ ಬಗ್ಗಾ ವಿಡಿಯೊ ಟ್ವೀಟಿಸಿದ್ದು ಈವರೆಗೆ 16 ಸಾವಿರಕ್ಕಿಂತಲೂ ಹೆಚ್ಚು ಮಂದಿ ಟ್ವೀಟ್‌ನ್ನು ಲೈಕ್ ಮಾಡಿದ್ದಾರೆ. ಸುಮಾರು 10ಸಾವಿರಕ್ಕಿಂತ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕೊಂಕಣ್ ಸೇನ್ ಶರ್ಮಾ, ಸುಳ್ಳು ಹಬ್ಬಿಸಬೇಡಿ, ಇದು ತಿರುಚಿದ ವಿಡಿಯೊ. ನಾವು ಅಲ್ಲಿ ಇದ್ದೆವು. ಅದು ಶಾಂತಿಯುತವಾಗಿ ನಡೆದ ಪ್ರತಿಭಟನೆಯಾಗಿತ್ತು, ದ್ವೇಷದಿಂದ ಕೂಡಿದ್ದಾಗಿರಲಿಲ್ಲ ಎಂದಿದ್ದಾರೆ.

ಬಗ್ಗಾ ಟ್ವೀಟ್ ಮಾಡಿದ ಅದೇ ವಿಡಿಯೊ ತುಣುಕನ್ನು ಕೆಲವರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಆದರೆ ಬಗ್ಗಾ ಆರೋಪದಂತೆಮುಂಬೈ ಪ್ರತಿಭಟನೆ ವೇಳೆ ಖಾಲಿದ್, ಹಿಂದೂವೋಂಸೇ ಆಜಾದಿ ಎಂಬ ಘೋಷಣೆ ಕೂಗಿಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ಮಾಡಿದೆ.

ಫ್ಯಾಕ್ಟ್‌ಚೆಕ್
ಮುಂಬೈನಲ್ಲಿ ನಡೆದ ಪ್ರತಿಭಟನೆ ಫೇಸ್‌ಬುಕ್‌ನಲ್ಲಿ ಲೈವ್ ಆಗಿತ್ತು. ಈ ಲೈವ್ ವಿಡಿಯೊದ ತುಣುಕನ್ನು ಬಗ್ಗಾ ಅವರು ಟ್ವೀಟಿಸಿದ್ದಾರೆ. ಲೈವ್ ವಿಡಿಯೊದಲ್ಲಿ 17.53ನೇ ನಿಮಿಷದ ನಂತರವಿರುವ ಘೋಷಣೆಗಳನ್ನು ಬಗ್ಗಾ ಟ್ವೀಟಿಸಿದ್ದಾರೆ.

ಖಾಲಿದ್ ಕೂಗಿದ ಘೋಷಣೆ ಏನು?
ವಿಡಿಯೊವನ್ನು ಗಮನವಿಟ್ಟು ಕೇಳಿದರೆ ಖಾಲಿದ್ ಹಿಂದಿಯಲ್ಲಿ ಕೂಗಿದ ಘೋಷಣೆ ಹೀಗಿದೆ.
ತೋ ಎನ್‌ಪಿಆರ್‌ ಸೇ ಆಜಾದಿ, ಔರ್ ಸಿಎಎ ಸೇ ಆಜಾದಿ, ಔರ್ ಸಿಎಎ ಸೇ ಆಜಾದಿ. ತೋ ಜಾತಿವಾದ್ ಸೇ ಆಜಾದಿ, ಔರ್ ಮನುವಾದ್ ಸೇ ಆಜಾದಿ, ಔರ್ ಸಂಘವಾದ್ ಸೇ ಆಜಾದಿ, ಔರ್ ಆರ್‌ಎಸ್‌ಎಸ್ ಸೇ ಆಜಾದಿ. ಔರ್ ಆರ್‌ಎಸ್‌ಎಸ್ ಸೇ ಆಜಾದಿ. ತೋ ಭಾಗವತ್ ಸೇ ಭೀ ಆಜಾದಿ, ತೋ ಉಸ್ ಮೋದಿ ಸೇ ಆಜಾದಿ.

ಮುಂಬೈ ಪ್ರತಿಭಟನೆಯ ದೃಶ್ಯ ಯುಟ್ಯೂಬ್‌ನಲ್ಲಿಯೂ ಇದೆ. ಯುಟ್ಯೂಬ್ ವಿಡಿಯೊದ 52:42 ನಂತರ ಖಾಲಿದ್ ಘೋಷಣೆ ಕೂಗುವುದು ಕೇಳಿಸುತ್ತದೆ. ಇಲ್ಲಿ ಖಾಲಿದ್ ಹಿಂದೂವೋಂಸೇ ಆಜಾದಿ ಎಂಬ ಘೋಷಣೆ ಕೂಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ.

ಏತನ್ಮಧ್ಯೆ, ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತನ್ನ ಮೇಲೆ ವ್ಯಥಾರೋಪ ಮಾಡುತ್ತಿದ್ದಾರೆ ಎಂದು ಖಾಲಿದ್ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT