ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: 114 ವರ್ಷಗಳಷ್ಟು ಹಳೆಯದಾದ ತೇಗದ ಮರ ₹40 ಲಕ್ಷಕ್ಕೆ ಹರಾಜು

Last Updated 21 ಫೆಬ್ರುವರಿ 2023, 14:17 IST
ಅಕ್ಷರ ಗಾತ್ರ

ಮಲಪ್ಪುರ: ಕೇರಳದ ಮಲಪ್ಪುರ ಜಿಲ್ಲೆಯ ನಿಲಂಬೂರಿನಲ್ಲಿರುವ ತೇಗದ ಮರದ ಪ್ಲಾಂಟೇಶನ್‌ನಲ್ಲಿ ಬ್ರಿಟಿಷರು ನೆಟ್ಟಿದ್ದ 114 ವರ್ಷಗಳಷ್ಟು ಹಳೆಯದಾದ ತೇಗದ ಮರವೊಂದು ಈಚೆಗೆ ₹40 ಲಕ್ಷ ದಾಖಲೆ ಬೆಲೆಗೆ ಹರಾಜಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮರವನ್ನು 1909ರಲ್ಲಿ ನೆಡಲಾಗಿತ್ತು. ಇದು ತನ್ನಷ್ಟಕ್ಕೇ ಒಣಗಿ ಬಿದ್ದ ನಂತರ ಹರಾಜು ಮಾಡಲಾಗಿದೆ. ವೃಂದಾವನ ಟಿಂಬರ್ಸ್ ಮಾಲೀಕ ಅಜೀಶ್‌ ಕುಮಾರ್‌ ಎಂಬುವವರು ಫೆಬ್ರುವರಿ 10ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ₹39.25 ಲಕ್ಷ ನೀಡಿ ಖರೀದಿಸಿದ್ದಾರೆ ಎಂದೂ ತಿಳಿಸಿದ್ದಾರೆ.

8 ಕ್ಯೂಬಿಕ್ ಮೀಟರ್ ದಪ್ಪದ ಮರವನ್ನು ಮೂರು ತುಂಡುಗಳಾಗಿ ಹರಾಜು ಮಾಡಲಾಯಿತು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT