ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಿದ ಮಾಜಿ ಸಚಿವ ಎಸ್‌.ವೇಣುಗೋಪಾಲಾಚಾರಿ

Published 16 ಏಪ್ರಿಲ್ 2024, 14:47 IST
Last Updated 16 ಏಪ್ರಿಲ್ 2024, 14:47 IST
ಅಕ್ಷರ ಗಾತ್ರ

ಹೈದರಾಬಾದ್: ಬಿಆರ್‌ಎಸ್‌ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಎಸ್‌.ವೇಣುಗೋಪಾಲಾಚಾರಿ ಅವರು ಮಂಗಳವಾರ ಕಾಂಗ್ರೆಸ್‌ ಸೇರಿದರು. 

ವೇಣುಗೋಪಾಲಾಚಾರಿ ಅವರು ಅವಿಭಜಿತ ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರಲ್ಲದೆ, ಅಟಲ್‌ ಬಿಹಾರಿ ವಾಜಪೇರಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ನವದೆಹಲಿ ವರದಿ: ಬಿಹಾರದ ವಿಕಾಸ್‌ಶೀಲ ಸ್ವರಾಜ್‌ ಪಕ್ಷದ ಮುಖಂಡ ಪ್ರೇಮ್‌ ಕುಮಾರ್‌ ಚೌಧರಿ ಮತ್ತು ನೇತ್ರತಜ್ಞ ಮನೀಷ್‌ ಕುಮಾರ್‌ ಯಾದವ್‌ ಅವರು ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಎಐಸಿಸಿ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಬಿಹಾರ ಉಸ್ತುವಾರಿ ಮೋಹನ್‌ ಪ್ರಕಾಶ್ ಮತ್ತು ಬಿಹಾರ ಪ್ರದೇಶ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಅವರು ಈ ಇಬ್ಬರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಪ್ರೇಮ್‌ ಕುಮಾರ್‌ ಚೌಧರಿ ಅವರು ವಿಕಾಸ್‌ಶೀಲ ಸ್ವರಾಜ್‌ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಿದ್ದಾರೆ ಎಂದು ಮೋಹನ್‌ ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT