ಗಡ್ಚಿರೋಲಿ, ಮಹಾರಾಷ್ಟ್ರ: ಭದ್ರತಾ ಪಡೆಗಳು ಸೋಮವಾರ ಇಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲ್ ಸಂಘಟನೆಯ ‘ಪೆರಿಮಿಲಿ ದಲಂ’ ಪಂಗಡದ ಕೆಲ ಸದಸ್ಯರು ಕತ್ರಂಗಟ್ಟ ಗ್ರಾಮದ ಬಳಿಯ ಅರಣ್ಯದಲ್ಲಿ ಅಡಗಿದ್ದಾರೆ ಮತ್ತು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಕುರಿತು ಗುಪ್ತಚರ ಮಾಹಿತಿ ದೊರಕಿತು. ಕೂಡಲೇ ಸಿ– 60 ಕಮಾಂಡೊದ ಎರಡು ತಂಡಗಳು, ಗಡ್ಚಿರೋಲಿ ಪೊಲೀಸರ ವಿಶೇಷ ಕಾರ್ಯಪಡೆಯನ್ನು ಕಾರ್ಯಾಚರಣೆ ನಡೆಸಲು ಕಳುಹಿಸಲಾಯಿತು ಎಂದು ನೀಲೋತ್ಪಲ್ನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಶೋಧಕಾರ್ಯ ನಡೆಸುತ್ತಿದ್ದ ಭದ್ರತಾ ಪಡೆಗಳ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಗುಂಡಿನ ಚಕಮಕಿಯ ಬಳಿಕ ಸ್ಥಳದಿಂದ ಮೂವರು ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ.

ಸ್ಥಳದಲ್ಲಿ ಒಂದು ಎಕೆ– 47 ರೈಫಲ್, ಒಂದು ಕಾರ್ಬೈನ್ ಬಂದೂಕು, ಒಂದು ಐಎನ್ಎಸ್ಎಎಸ್ ರೈಫಲ್, ನಕ್ಸಲ್ ಚಳುವಳಿಗೆ ಸಂಬಂಧಿಸಿದ ಪುಸ್ತಕ ದೊರಕಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.