ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: 46 ಬಾಲ ಕಾರ್ಮಿಕ ರಕ್ಷಣೆ

Last Updated 28 ಆಗಸ್ಟ್ 2021, 8:20 IST
ಅಕ್ಷರ ಗಾತ್ರ

ಸುಲ್ತಾನಪುರ: ‘ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಂಟಿ ಸಮಿತಿಯೊಂದು ಎರಡು ದಿನಗಳ ಅಭಿಯಾನ ನಡೆಸಿದ್ದು, ಈ ವೇಳೆ 46 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿಯ ವಿರುದ್ಧದ ಅಭಿಯಾನದ ಭಾಗವಾಗಿ ಕುರೇಭರ್, ಜೈಸಿಂಗ್‌ಪುರ್, ಕಡಿಪುರ, ಲಂಭುವಾ, ಬಾಲ್ಡಿ ರಾಯ್, ಸದರ್ ತೆಹೆಸಿಲ್‌ ಮತ್ತು ಕಟ್ಕಾ ಬಜಾರ್‌ನಲ್ಲಿ ಗುರುವಾರ ಮತ್ತು ಶುಕ್ರವಾರದಂದು ದಾಳಿ ನಡೆದಿವೆ ಎಂದು ಅವರು ಮಾಹಿತಿ ನೀಡಿದರು.

‘ಈ ಅಭಿಯಾನದ ವೇಳೆ ರಕ್ಷಿಸಲಾದ ಮಕ್ಕಳನ್ನು ವೈದ್ಯಕೀಯ ಪ‍ರೀಕ್ಷೆಗೆ ಕರೆದೊಯ್ಯಲಾಗಿದೆ. ಮಕ್ಕಳಿಂದ ಕೆಲಸಗಳನ್ನು ಮಾಡಿಸುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದುಸಹಾಯಕ ಕಾರ್ಮಿಕ ಆಯುಕ್ತ ನಾಸಿರ್ ಖಾನ್ ತಿಳಿಸಿದರು.

ಈ ಅಭಿಯಾನಕ್ಕಾಗಿ ಜಿಲ್ಲಾಧಿಕಾರಿ ರವೀಶ್‌ ಗುಪ್ತಾ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ ಅತುಲ್ ವತ್ಸ್‌ ನಿರ್ದೇಶನದ ಮೇರೆಗೆ ಜಂಟಿ ತಂಡವನ್ನು ರಚಿಸಲಾಗಿತ್ತು.ಈ ತಂಡದಲ್ಲಿ ಕಾರ್ಮಿಕ ಇಲಾಖೆ ಮತ್ತು ಮಕ್ಕಳ ಸಮಿತಿಗೆ ಸಂಬಂಧಿಸಿದ ಅಧಿಕಾರಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT