ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಡಿ ಪ್ರವೇಶ : ಐವರು ಬಾಂಗ್ಲಾದೇಶೀಯರು, 12 ಮಂದಿ ಭಾರತೀಯರ ಬಂಧನ

Last Updated 31 ಅಕ್ಟೋಬರ್ 2020, 7:21 IST
ಅಕ್ಷರ ಗಾತ್ರ

ಕೋಲ್ಕತ್ತಾ: ಸಂಬಂಧಿಕರನ್ನು ಭೇಟಿಯಾಗಲು ಬಾಂಗ್ಲಾದೇಶಕ್ಕೆ ಹೊರಟಿದ್ದ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಲು ಅಕ್ರಮವಾಗಿ ‘ಭಾರತ – ಬಾಂಗ್ಲಾ‘ ಗಡಿ ದಾಟುತ್ತಿದ್ದ ಹದಿನೇಳು ಮಂದಿ ಬಾಂಗ್ಲಾದೇಶೀಯರು ಮತ್ತು ಭಾರತೀಯರನ್ನು ಗಡಿಭದ್ರತಾ ಪಡೆಯ ಯೋಧರು ಬಂಧಿಸಿ, ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬಂಧಿತರಲ್ಲಿ ಐವರು ಬಾಂಗ್ಲಾದೇಶೀಯರು ಮತ್ತು 12 ಮಂದಿ ಭಾರತೀಯರು ಇದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಭಾರತ – ಬಾಂಗ್ಲಾ ಗಡಿಯ ರಾಮನನಗರ ಔಟ್‌ಪೋಸ್ಟ್‌ ಮೂಲಕ ಗಡಿ ದಾಟುತ್ತಿದ್ದ ಈ ಹದಿನೇಳು ಮಂದಿಯನ್ನು ಬಿಎಸ್‌ಎಫ್‌ ಯೋಧರು ಬಂಧಿಸಿರುವುದಾಗಿ ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಂಧಿತ ಭಾರತೀಯರು ‘ಪಶ್ಚಿಮ ಬಂಗಾಳದ ಬೆನಪೋಲೆ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ದಾಟಿ ಬಾಂಗ್ಲಾದೇಶ ದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಿ ವಾಪಸ್ ಭಾರತಕ್ಕೆ ಹಿಂದಿರುಗುತ್ತಿದ್ದೆವು‘ ಎಂದು ಹೇಳಿದ್ದರೆ, ಬಾಂಗ್ಲಾದೇಶಿಯರು ‘ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದೆವು‘ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಹದಿನೇಳು ಮಂದಿಯನ್ನು ಬಿಎಸ್‌ಎಫ್ ಯೋಧರು ಹನ್ಸಖಾಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಅದೇ ದಿನ ಒಬ್ಬ ಭಾರತೀಯನನ್ನು ಬಿಎಸ್‌ಎಫ್ ತಂಡದವರು ಖಾಸ್ಮಾಹಲ್ ಔಟ್‌ ಪೋಸ್ಟ್‌ನಲ್ಲಿ ವಶಕ್ಕೆ ಪಡೆದು, ಅವರಿಂದ 10 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT