ಜಮ್ಮು: ಪಾಕಿಸ್ತಾನದಿಂದ ದಾಳಿ ಎದುರಿಸುತ್ತಿರುವ ಜಮ್ಮು ಗಡಿ ವಿಭಾಗದ ನಿವಾಸಿಗಳ ಅನುಕೂಲಕ್ಕಾಗಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯ ಬಳಿ 14ಸಾವಿರಕ್ಕೂ ಹೆಚ್ಚು ಸಮುದಾಯ ಮತ್ತು ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಂಛ್ ಮತ್ತು ರಾಜೌರಿ ಗಡಿ ನಿಯಂತ್ರಣ ರೇಖೆಯ ಬಳಿ 7298 ಬಂಕರ್ ಹಾಗೂ ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ 7162 ಸುರಂಗ ಬಂಕರ್‌ಗಳನ್ನುನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.

’14,460 ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸದ್ಯ ₹415.73ಕೋಟಿ ಮಂಜೂರು ಮಾಡಿದೆ. 160 ಚದರ ಅಡಿ ಅಳತೆಯ ವೈಯಕ್ತಿಯ ಬಂಕರ್ ಎಂಟು ಜನರು ಮತ್ತು 800 ಚದರ ಅಡಿ ಸಮುದಾಯ ಬಂಕರ್‌ಗಳು 40 ಜನರನ್ನು ಹೊರುವ ಸಾಮರ್ಥ್ಯ ಹೊಂದಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ಕಳೆದ ವರ್ಷದ ದಾಳಿಯಿಂದಾಗಿ 47 ನಾಗರಿಕರು, 19 ಸೈನಿಕರು ಹಾಗೂ 12 ಭಾರತೀಯ ಗಡಿ ಭದ್ರತಾ ಪಡೆಯುಸಿಬ್ಬಂದಿ ಬಲಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.