ಜಮ್ಮು : ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸುತ್ತಿರುವ ವಿಚಾರ ಜಮ್ಮು–ಕಾಶ್ಮೀರದ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಗಡಿನಿಯಂತ್ರಣ ರೇಖೆಯಲ್ಲಿ ತೀರಾ ಕೆಟ್ಟ ಪರಿಸ್ಥಿತಿ ಇದೆ. ಈ ಬಗ್ಗೆ ವಿವರಣೆ ನೀಡಬೇಕು ಎಂದು ಬಿಜೆಪಿ ಮತ್ತು ಸಿಪಿಐಎಂ ಸದಸ್ಯರು ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರನ್ನು ಒತ್ತಾಯಿಸಿದರು.

‘ರಜೌರಿಯ ಗಡಿ ನಿಯಂತ್ರಣ ರೇಖೆಯಿಂದ ವಲಸೆ ಹೋಗಿರುವವರಿಗೆ ಬದಲಿ ಸುರಕ್ಷಿತ ಆಶ್ರಯ ಮತ್ತಿತರ ಸೌಲಭ್ಯಗಳನ್ನು ಪೂರೈಸುವಂತೆ ಸರ್ಕಾರ ನಿರ್ದೇಶನ ನೀಡಿದೆ’ ಎಂದು ನಿರ್ಮಲ್ ಸಿಂಗ್ ಉತ್ತರಿಸಿದರು.

ತಾವು ಪ್ರತಿನಿಧಿಸುತ್ತಿರುವ ನೌಷೇರ್ ವಿಧಾನಸಭಾ ಕ್ಷೇತ್ರದಲ್ಲಿ ಶೆಲ್ ಮತ್ತು ಗುಂಡಿನ ದಾಳಿ ಮಿತಿಮೀರಿದೆ. ಅಲ್ಲಿನ ಜನರು ತೊಂದರೆಗೊಳಗಾಗಿ
ದ್ದಾರೆ. ವಲಸೆ ಹೋಗುತ್ತಿದ್ದಾರೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ರವೀಂದರ್ ರೈನಾ ಹೇಳಿದರು.

ಶಾಲೆಗಳು ಮುಚ್ಚಿವೆ. ಗಡಿ ಭಾಗದ ಮನೆಗಳು ತೊಂದರೆಗೊಳಗಾಗಿವೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ನೌಷೇರ್ ಸೆಕ್ಟರ್‌ನ ಪರಿಸ್ಥಿತಿಯ ಅಧ್ಯಯನಕ್ಕೆ ಸಚಿವರ ತಂಡವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂ ಸದಸ್ಯ ಎಂ.ವೈ. ತಾರಿಗಮಿ ಮತ್ತು ಬಿಜೆಪಿಯ ಇತರ ಸದಸ್ಯರು ಇವರಿಗೆ ಬೆಂಬಲ ವ್ಯಕ್ತ
ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.