ನವದೆಹಲಿ: ಸದ್ಯದ 10 ಅಂಕಿಗಳ ಮೊಬೈಲ್ ಸಂಪರ್ಕ ಸಂಖ್ಯೆಗಳು 13 ಅಂಕಿಗಳಾಗಿ ಬದಲಾಗಲಿವೆ ಎಂಬ ಮಾಧ್ಯಮ ವರದಿಗಳನ್ನು ಮೊಬೈಲ್ ಸೇವಾಸಂಸ್ಥೆಗಳು ನಿರಾಕರಿಸಿವೆ.

‘ಎಟಿಎಂ ಕಾರ್ಡ್ ಸ್ವೈಪಿಂಗ್ ಯಂತ್ರಗಳು, ವಾಹನ ಜಾಲಪತ್ತೆ ವ್ಯವಸ್ಥೆಯ ಉಪಕರಣಗಳಲ್ಲಿ ಬಳಸುವ ‘ಮೆಷಿನ್ 2 ಮೆಷಿನ್’ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು 13 ಅಂಕಿಗಳಾಗಿ ಬದಲಿಸಿ ಎಂದು ದೂರಸಂಪರ್ಕ ಇಲಾಖೆಯು ಮೊಬೈಲ್ ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.

ಈ ಸಂಬಂಧ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಸಂವಹನಕ್ಕೆ ಬಳಸುವ 10 ಅಂಕಿಗಳ ಮೊಬೈಲ್ ಸಂಪರ್ಕ ಸಂಖ್ಯೆಗಳು ಬದಲಾಗುವುದಿಲ್ಲ’ ಎಂದು ಭಾರತೀಯ ಮೊಬೈಲ್ ಸೇವಾಸಂಸ್ಥೆಗಳ ಒಕ್ಕೂಟವು ಸ್ಪಷ್ಟಪಡಿಸಿದೆ.

‘ಮೆಷಿನ್ 2 ಮೆಷಿನ್’ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು 13 ಅಂಕಿಗಳಿಗೆ ಬದಲಿಸುವ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದೆ. ಈ ಪ್ರಕ್ರಿಯೆ 2018ರ ಡಿಸೆಂಬರ್ 31ರ ಒಳಗೆ ಪೂರ್ಣಗೊಳ್ಳಬೇಕು. ಜುಲೈ 1ರಿಂದ ಸಂಪರ್ಕ ಪಡೆಯುವ ‘ಮೆಷಿನ್ 2 ಮೆಷಿನ್’ ಸಿಮ್ ಕಾರ್ಡ್‌ಗಳು 13 ಅಂಕೆಗಳ ಸಂಪರ್ಕ ಸಂಖ್ಯೆಯನ್ನೇ ಹೊಂದಿರಬೇಕು. ಈ ಬದಲಾವಣೆಗೆ ಅಗತ್ಯವಿರುವ ತಾಂತ್ರಿಕ ಬದಲಾವಣೆಗಳನ್ನು ಕಂಪನಿಗಳು ಈಗಿಂದಲೇ ಆರಂಭಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.