ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ–ಮೆಹುಲ್ ಚೋಕ್ಸಿ ಒಡೆತನಕ್ಕೆ ಸೇರಿದ ಒಂಬತ್ತು ಐಷಾರಾಮಿ ಕಾರುಗಳನ್ನು ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಜಪ್ತಿ ಮಾಡಿರುವ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಪೋರ್ಷೆ ಪನಮೆರಾ, 2 ಮರ್ಸಿಡೀಸ್ ಬೆಂಜ್, ಜಿಎಲ್ ಕ್ಲಾಸ್, ಮೂರು ಹೋಂಡಾ ಕಾರುಗಳು ಸೇರಿವೆ.

ಮುಂಬೈ ಬಳಿಯ ಅಲಿಬಾಗ್ನಲ್ಲಿರುವ ನೀರವ್ ಮೋದಿಯ ₹32 ಕೋಟಿ ವೆಚ್ಚದ ಐಷಾರಾಮಿ ತೋಟದ ಮನೆಯನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದರು.

ಮತ್ತೊಂದೆಡೆ ಮುಂಬೈನ ನಾಲ್ಕು ಶೆಲ್ ಕಂಪನಿ ಸೇರಿದಂತೆ ದೇಶದ 17 ಕಡೆಗಳಲ್ಲಿ ಹೊಸದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಕೈಗೊಂಡಿದ್ದಾರೆ.

ಎಂಟು ದಿನಗಳಿಂದ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಆಪಾರ ಪ್ರಮಾಣದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ನೀರವ್ ಮೋದಿಯ 36ಕ್ಕೂ ಹೆಚ್ಚು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ...

ನೀರವ್ ಮೋದಿ ತೋಟದ ಮನೆಗೆ ಬೀಗ

ಪಿಎನ್ಬಿ ಹಗರಣ: ಮತ್ತೊಬ್ಬ ಬ್ಯಾಂಕ್ ಅಧಿಕಾರಿ ಸೆರೆ

ಪಿಎನ್ಬಿ: ಐವರ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.