ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್: ಮೊದಲ ರ‍್ಯಾಂಕ್ ಹಂಚಿಕೊಂಡ 67 ವಿದ್ಯಾರ್ಥಿಗಳು

Published 4 ಜೂನ್ 2024, 16:39 IST
Last Updated 4 ಜೂನ್ 2024, 16:39 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ, ಪ್ರಸಕ್ತ ಶೈಕ್ಷಣಿಕ ಸಾಲಿನ ‘ನೀಟ್‌–ಯುಜಿ’ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. 67 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ ಹಂಚಿಕೊಂಡಿದ್ದಾರೆ. ಉನ್ನತ ರ‍್ಯಾಂಕ್ ಹಂಚಿಕೊಂಡವರಲ್ಲಿ 14 ವಿದ್ಯಾರ್ಥಿನಿಯರು ಸೇರಿದ್ದಾರೆ.

ಒಟ್ಟು 67 ವಿದ್ಯಾರ್ಥಿಗಳು ಏಕರೂಪವಾಗಿ 99.997129 ಪರ್ಸೆಂಟೈಲ್ ಅಂಕ ಪಡೆದಿದ್ದಾರೆ. ಹೀಗಾಗಿ, ಈ ಎಲ್ಲರಿಗೂ 1ನೇ ರ‍್ಯಾಂಕ್‌ ಹಂಚಿಕೆಯಾಗಿದೆ ಎಂದು ಎನ್‌ಟಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೊದಲ ರ‍್ಯಾಂಕ್‌ ಗಳಿಸಿದ 67 ವಿದ್ಯಾರ್ಥಿಗಳಲ್ಲಿ ರಾಜಸ್ಥಾನದ 11, ತಮಿಳುನಾಡಿನ 8 ಮತ್ತು ಮಹಾರಾಷ್ಟ್ರದ 7 ವಿದ್ಯಾರ್ಥಿಗಳು ಸೇರಿದ್ದಾರೆ. 

ಈ ಪರೀಕ್ಷೆಯ ಮೂಲಕ ಶೇ 56.4ರಷ್ಟು ಅಭ್ಯರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಪ್ರವೇಶ ಪರೀಕ್ಷೆಯು ಮೇ 5ರಂದು ದೇಶದ ವಿವಿಧೆಡೆ ಏಕಕಾಲಕ್ಕೆ ನಡೆದಿತ್ತು. 

ಟ್ರೈ–ಬ್ರೇಕಿಂಗ್‌ ಸೂತ್ರವನ್ನು ಆಧರಿಸಿ ಜೀವವಿಜ್ಞಾನ ವಿಷಯ ಹಾಗೂ ನಂತರದಲ್ಲಿ ಆದ್ಯತೆವಾರು ರಾಸಾಯನ ವಿಜ್ಞಾನ ಮತ್ತು ಭೌತವಿಜ್ಞಾನ ವಿಷಯಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಆಧರಿಸಿ ಮೆರಿಟ್‌ ಪ‍ಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಈ ವರ್ಷ ನೀಟ್ ಪರೀಕ್ಷೆಗೆ ದಾಖಲೆಯ ಅಂದರೆ 24.06 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿದ್ದರು. ಉತ್ತೀರ್ಣ ಪ್ರಮಾಣ ಬಹುತೇಕ ಕಳೆದ ವರ್ಷದಷ್ಟೇ ಅಂದರೆ ಶೇ 56.2ರಷ್ಟು ಆಗಿದೆ ಎಂದು ಅಧಿಕಾರಿಯು ತಿಳಿಸಿದರು. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT