ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನಿಂದ ಬಂದ 68ಪ್ರಯಾಣಿಕರಿಗೆ ಕೋವಿಡ್; ರೂಪಾಂತರಿತ ವೈರಸ್ ಪ್ರಕರಣಗಳಿಲ್ಲ

Last Updated 3 ಜನವರಿ 2021, 8:33 IST
ಅಕ್ಷರ ಗಾತ್ರ

ಮುಂಬೈ: ಇಂಗ್ಲೆಂಡ್‌ನಿಂದ ಮಹಾರಾಷ್ಟ್ರಕ್ಕೆ ಮರಳಿರುವ ಒಟ್ಟು 68 ಪ್ರಯಾಣಿಕರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಇದುವರೆಗೆ ರೂಪಾಂತರಗೊಂಡ ವೈರಸ್‌ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿಯಾಗಿವೆ.

‘ನವೆಂಬರ್‌ 15 ಮತ್ತು ಡಿಸೆಂಬರ್‌ 23ರ ಅವಧಿಯಲ್ಲಿ ಇಂಗ್ಲೆಂಡ್‌ನಿಂದ ಬಂದಿಳಿದ 4,474 ಜನರನ್ನು ಪತ್ತೆಹಚ್ಚಲಾಗಿದ್ದು, 3,278 ಜನರಿಗೆ ಆರ್‌ಟಿ–ಪಿಸಿಆರ್‌ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 68 ಜನರಿಗೆ ಸೋಂಕು ದೃಢಪಟ್ಟಿದೆ. ಆದರೆ, ಅದರಲ್ಲಿ ರೂಪಾಂತರಗೊಂಡ ವೈರಸ್‌ ಪ್ರಕರಣಗಳಿವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಮಹಾರಾಷ್ಟ್ರ ಕಣ್ಗಾವಲು ಕಚೇರಿಯ ಪ್ರದೀಪ್‌ ಅವಟೆ ತಿಳಿಸಿದ್ದಾರೆ.

ಸೋಂಕು ಪ್ರಕರಣಗಳ ವಿಧವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸೋಂಕಿತರ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. 68ರಲ್ಲಿ ಆರು ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಸದ್ಯ ಸೋಂಕಿತರಲ್ಲಿ ಮುಂಬೈನ 29, ಪುಣೆಯ 13, ಥಾಣೆಯ 7, ನಾಗಪುರದ 9, ನಾಸಿಕ್‌, ಔರಂಗಾಬಾದ್‌, ರಾಯಗಢ, ಬುಲ್ಧಾನದ ತಲಾ ಇಬ್ಬರು ಹಾಗೂ ನಾಂದೇಡ್, ವಾಶೀಮ್‌ನ ತಲಾ ಒಬ್ಬರು ಎಂದು ಗುರುತಿಸಲಾಗಿದೆ.

ರೂಪಾಂತರಿತ ವೈರಸ್‌ನಿಂದ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗಲಿವೆ ಎನ್ನಲಾಗಿದ್ದು, ಹೊಸ ಪ್ರಕರಣಗಳ ಬಗ್ಗೆ ನಿಗಾ ಇಡುವಂತೆ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಎಚ್ಚರಿಸಿದೆ. ಸೋಂಕಿತರ ಸಂಪರ್ಕ ಪತ್ತೆಗೆ ಸರ್ಕಾರ ಗಮನಹರಿಸಿದೆ.‘ಸದ್ಯ ಇಂಗ್ಲೆಂಡ್‌ನಿಂದ ಬಂದಿರುವ ಪ್ರಯಾಣಿಕರು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದಿರುವ ಒಟ್ಟು 426 ಜನರನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದೆ’ ಎಂದು ಅವಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT