ನವದೆಹಲಿ: 2014ರ ನಂತರ ಭಾರತದಲ್ಲಿ ಯಾವುದೇ ಭೀಕರ ಸ್ಫೋಟಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಳೆದ ಐದು ವರ್ಷಗಳಲ್ಲಿ 942 ಬಾಂಬ್ ದಾಳಿ ನಡೆದಿದೆ ಎಂದಿದ್ದಾರೆ.
2014ರ ನಂತರ ಭಾರತದಲ್ಲಿ ಬಾಂಬ್ ಸದ್ದು ಕೇಳಲೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.ಆದರೆ ಪುಲ್ವಾಮಾ, ಪಠಾಣ್ಕೋಟ್, ಉರಿ, ಗಡ್ಚಿರೋಲಿ ಸೇರಿದಂತೆ 942 ಭೀಕರ ಬಾಂಬ್ ದಾಳಿಗಳು ನಡೆದಿವೆ. ಪ್ರಧಾನಿ ಕಿವಿಗೊಟ್ಟು ಕೇಳಲಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
The PM says since 2014 the sounds of blasts can't be heard in India.
Phulwama... Pathankot.. Uri... Gadchiroli.... and 942 other major bombings since 2014.