ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸೋಡಿಯಾ 14 ಫೋನ್‌ ನಾಶಪಡಿಸಿದ್ದಾರೆಂದು ED ಸುಳ್ಳು ಹೇಳುತ್ತಿದೆ: ಆಪ್‌ ನಾಯಕ

Last Updated 14 ಏಪ್ರಿಲ್ 2023, 12:06 IST
ಅಕ್ಷರ ಗಾತ್ರ

ದೆಹಲಿ : ಸಾಕ್ಷ್ಯಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಡಿಜಿಟಲ್ ಸಾಕ್ಷ್ಯಗಳನ್ನು(ಫೋನ್‌) ನಾಶ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್‌ ಸಿಂಗ್ ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧ‍‍ಪಟ್ಟಂತೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಮನೀಶ್‌ ಸಿಸೋಡಿಯ ಬಂಧಿತರಾಗಿದ್ದು, ಜಾರಿ ನಿರ್ದೇಶನಾಲಯ ಹಗರಣದ ತನಿಖೆ ನಡೆಸುತ್ತಿದೆ. ‘ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಸಿಸೋಡಿಯಾ ಡಿಜಿಟಲ್‌ ಸಾಕ್ಷ್ಯ ನಾಶ ಮಾಡಿದ್ದಾರೆ. ಹಲವು ಪೋನ್‌ಗಳನ್ನು ಬದಲಾಯಿಸಿದ್ದಲ್ಲದೆ ಸುಮಾರು 14 ಪೋನ್‌ಗಳನ್ನು ನಾಶ ಮಾಡಿದ್ದಾರೆ‘ ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿತ್ತು.

‘ಪ್ರತಿ ಬಾರಿಯೂ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದೆ. 14 ಫೋನ್‌ಗಳನ್ನು ಸಿಸೋಡಿಯಾ ನಾಶ ಮಾಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಸಿಸೋಡಿಯಾ ಯಾವ ಫೋನ್‌ಅನ್ನು ಕೂಡ ನಾಶ ಪಡಿಸಿಲ್ಲ. 14ರಲ್ಲಿ ಐದು ಫೋನ್‌ ಇಡಿ ಮತ್ತು ಸಿಬಿಐ ವಶಪಡಿಸಿಕೊಂಡಿದೆ‘ ಎಂದು ಸಂಜಯ್‌ ಸಿಂಗ್ ಹೇಳಿದ್ದಾರೆ.

ತನಿಖಾ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ‘ಎಲ್ಲ 14 ಫೋನ್‌ಗಳು ಕೆಲಸ ಮಾಡುತ್ತಿವೆ. 14ರಲ್ಲಿ ಐದು ಫೋನ್‌ಗಳನ್ನು ಇಡಿ ಮತ್ತು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಇಡಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಾರಿ ನಿರ್ದೇಶನಾಲಯ ಪಟ್ಟಿ ಮಾಡಿರುವ ಫೋನ್ ಸಂಖ್ಯೆಗಳಲ್ಲಿ ಸಿಸೋಡಿಯಾ ಅವರ ಮನೆ ಸಹಾಯಕರು, ಚಾಲಕ ಮತ್ತು ಇತರ ಸಿಬ್ಬಂದಿಗೆ ಸೇರಿದ ಫೋನ್ ಸಂಖ್ಯೆಗಳು ಕೂಡ ಸೇರಿವೆ‘ ಎಂದು ಆರೋಪಿಸಿದ್ದಾರೆ.

‘ಈ ರೀತಿ ಸುಳ್ಳು ಆಪಾದನೆ ಮಾಡುವ ಮೂಲಕ ತನಿಖಾ ಸಂಸ್ಥೆಗಳನ್ನೇ ಅ‍ಪಹಾಸ್ಯ ಮಾಡಲಾಗುತ್ತಿದೆ. 14 ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು ಮತ್ತು ದೆಹಲಿಯ ಅತ್ಯುತ್ತಮ ಶಿಕ್ಷಣ ಸಚಿವರನ್ನು ದೂಷಿಸುತ್ತಿರುವ ಇ.ಡಿ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು‘ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT