ನವದೆಹಲಿ: ಜಾರ್ಖಂಡ್ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪದ ಮೇಲೆ ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿಗೆ ರಾಂಚಿಯ ವಿಶೇಷ ನ್ಯಾಯಾಲಯವು 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರಕರಣದಲ್ಲಿ ವಿವಿಧ ಆರೋಪಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿರುವ ಬಿಹಾರದ ಔರಂಗಾಬಾದ್ನ ಮಂಟು ಶರ್ಮಾ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಮಂಟು ಶರ್ಮಾ ಸಿಪಿಐ ( ಮಾವೋವಾದಿ ) ಸದಸ್ಯರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿದ್ದಾನೆ. ಅವನನ್ನು ಬಂಧಿಸಲು ಎನ್ಐಎ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

2012ರ ಆಗಸ್ಟ್ನಲ್ಲಿ ರಾಜ್ಯದ ಸಿಲೋದರ್ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐನ (ಮಾವೋವಾದಿ) ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪೂರೈಕೆ ಘಟಕದ ಮೇಲೆ ಜಾರ್ಖಂಡ್ ಪೊಲೀಸರು ದಾಳಿ ಮಾಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎಎನ್ಐ ವಹಿಸಿಕೊಂಡಿತ್ತು.

ಪ್ರಕರಣ ಸಂಬಂಧ ಪ್ರಫುಲ್ಲ ಕುಮಾರ್ ಮಾಲಾಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಅಮೆರಿಕ ನಿರ್ಮಿತ ಎಂ-16 ರೈಫಲ್, 14 ಸಜೀವ ಗುಂಡುಗಳು, ಎರಡು ಸೆಲ್ಫೋನ್ಗಳು ಮತ್ತು ಒಂದು ಗುಂಡು ನಿರೋಧಕ ಜಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದರು.

ಮಾಲಾಕರ್ ವಿಚಾರಣೆಯ ನಡೆಯುತ್ತಿರುವ ವೇಳೆಯೇ ಮತ್ತೊಬ್ಬ ಆರೋಪಿ ಅನಿಲ್ ಕುಮಾರ್ ಯಾದವ್ ಎಂಬಾತನನ್ನು ಬಂಧಿಸಲಾಗಿತ್ತು. ಆತನಿಂದ ಒಂದು 9 ಎಂಎಂ ಪಿಸ್ತೂಲ್, ಸಜೀವ ಗುಂಡುಗಳು, ₹9 ಲಕ್ಷ ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಟು, ಯಾದವ್ ಮತ್ತು ಮಾಲಾಕರ್ ಜೊತೆ ನಿಕಟ ಸಂಪರ್ಕದಲ್ಲಿದ್ದ ಎಂದು ಎನ್ಐಎ ಹೇಳಿದೆ.

2014 ಮತ್ತು 2017ರ ನಡುವೆ ಎನ್ಐಎ ಮಾಲಾಕರ್, ಯಾದವ್ ಮತ್ತು ಮಂಟು ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. 2024ರ ಡಿಸೆಂಬರ್ನಲ್ಲಿ ಎನ್ಐಎ ವಿಶೇಷ ನ್ಯಾಯಾಲಯವು ಮಾಲಾಕರ್ ಮತ್ತು ಯಾದವ್ ತಪ್ಪಿತಸ್ಥರೆಂದು ಘೋಷಿಸಿ 15 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.

ವಿಶೇಷ ನ್ಯಾಯಾಲಯವು ಇಂದು (ಮಾರ್ಚ್ 10) ಮಂಟುಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಐಪಿಸಿಯ ಸೆಕ್ಷನ್ 121A, 120B, 414, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(1-AA)/35 ಮತ್ತು 26(2), ಯುಎ(ಪಿ) ಕಾಯ್ದೆಯ ಸೆಕ್ಷನ್ 18 ಮತ್ತು 20 ಮತ್ತು ಸೆಕ್ಷನ್ 17 ಸಿಎಲ್ಎ ಕಾಯ್ದೆಯ ಅಡಿಯಲ್ಲಿ ಶಿಕ್ಷೆಗಳು 3ರಿಂದ 15 ವರ್ಷಗಳವರೆಗೆ ಇರುತ್ತವೆ ಎಂದು ಎನ್ಐಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.