ನವದೆಹಲಿ: ಅಪಘಾತ ಪ್ರಕರಣಗಳಲ್ಲಿ ಗಂಭೀರ ಗಾಯಗೊಂಡು ಬದುಕುಳಿದ ವ್ಯಕ್ತಿಗೆ ಭವಿಷ್ಯದಲ್ಲಿ ಎದುರಾಗುವಶಾಶ್ವತ ಅಂಗವೈಕಲ್ಯದ ಸಾಧ್ಯತೆಗೆ ಪರಿಹಾರ ಕೊಡುವುದನ್ನು ನಿರಾಕರಿಸಲಾಗುವುದು ಎಂಬುದನ್ನು ಸಮರ್ಥಿಸಲಾಗದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.

ನ್ಯಾಯಾಲಯದಿಂದ ಪರಿಹಾರ ನಿರ್ಧರಿಸುವ ಪ್ರಕ್ರಿಯೆಯು ಮೂಲಭೂತವಾಗಿ ತುಂಬಾ ಕಠಿಣ ಸವಾಲು ಮತ್ತು ಇದು ಪರಿಪೂರ್ಣ ವಿಜ್ಞಾನವಾಗಲು ಸಾಧ್ಯವಿಲ್ಲ. ಗಾಯ ಮತ್ತು ಅಂಗವೈಕಲ್ಯಕ್ಕೆ ಪರಿಪೂರ್ಣವಾದ ಪರಿಹಾರ ನಿಗದಿಪಡಿಸುವುದು ಅಷ್ಟು ಸುಲಭವಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ಕರ್ನಾಟಕದಲ್ಲಿ 2012ರಜುಲೈನಲ್ಲಿ ರಸ್ತೆ ಅಪಘಾತದಲ್ಲಿ ಶೇ 45 ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ವ್ಯಕ್ತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ₹21,78,600ಕ್ಕೆ ಹೆಚ್ಚಿಸಿದೆ.

ಬೆಳಗಾವಿಯ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ನೀಡಿದ್ದ ಪರಿಹಾರವನ್ನು ₹3,13,800ನಿಂದ ₹ 9,26,800ಕ್ಕೆ ಹೆಚ್ಚಿಸಿ 2018ರ ಏಪ್ರಿಲ್‌ನಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಿದ್ರಾಮ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಆಲಿಸಿದಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಪರಿಹಾರ ಮೊತ್ತ ಹೆಚ್ಚಿಸುವಂತೆಯೂ ಮೇಲ್ಮನವಿಯಲ್ಲಿ ಅರ್ಜಿದಾರರು ಕೋರಿದ್ದರು.

ಅರ್ಜಿಯನ್ನು ಸಲ್ಲಿಸಿದ ದಿನದಿಂದ ಪಾವತಿಯ ಅನುಷ್ಠಾನದ ದಿನಾಂಕದವರೆಗೆ ವಾರ್ಷಿಕ ಶೇ 6ರ ದರದಲ್ಲಿ ಬಡ್ಡಿಯೊಂದಿಗೆ ₹ 6,13,000 ಪರಿಹಾರವನ್ನು ನ್ಯಾಯಮಂಡಳಿಯು ನೀಡಿರುವುದನ್ನು ಪೀಠವು ಗಮನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.