ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲುಗಾರ್ತಿ ಶೀತಲ್‌ ದೇವಿ ಹುಟ್ಟೂರಿಗೆ ಬಸ್‌ ಸೇವೆ: ಸ್ಥಳೀಯರ ಹರ್ಷ

Published 19 ನವೆಂಬರ್ 2023, 14:51 IST
Last Updated 19 ನವೆಂಬರ್ 2023, 14:51 IST
ಅಕ್ಷರ ಗಾತ್ರ

ಜಮ್ಮು: ಪ್ಯಾರಾ ಬಿಲ್ಲುಗಾರ್ತಿ ಶೀತಲ್ ದೇವಿ ಅವರ ಹುಟ್ಟೂರು, ಜಮ್ಮು ಮತ್ತು ಕಾಶ್ಮೀರದ ಕಿಶ್‌ತ್ವಾರ ಜಿಲ್ಲೆಯ ಲೊಯಿಧಾರ್ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಬಸ್‌ ಸೇವೆ ಲಭ್ಯವಾಗಿದೆ. ಇದು ಸ್ಥಳೀಯ ನಿವಾಸಿಗಳಿಗೆ ಹರ್ಷ ತರಿಸಿದೆ.  

ಲೊಯಿಧಾರ್‌ಗೆ ತೆರಳುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಸ್‌ಆರ್‌ಟಿಸಿ) ಬಸ್‌ಗೆ ಕಿಶ್‌ತ್ವಾರ ಜಿಲ್ಲಾಧಿಕಾರಿ ದೇವಾಂಶ್ ಯಾದವ್ ಅವರು ಭಾನುವಾರ ಹಸಿರು ನಿಶಾನೆ ತೋರಿದರು ಎಂದು ಅಧಿಕಾರಿಗಳು ತಿಳಿಸಿದರು. 

ಬಸ್‌ ಸೇವೆ ಒದಗಿಸಿದ್ದಕ್ಕಾಗಿ ಸ್ಥಳೀಯ ಸರಪಂಚ ಬಷೀರ್ ಅಹಮದ್ ಅವರು ಜಿಲ್ಲಾಡಳಿತ ಮತ್ತು ಎಸ್‌ಆರ್‌ಟಿಸಿಗೆ ಅಭಿನಂಧನೆ ಸಲ್ಲಿಸಿದ್ದಾರೆ. 

ಆರ್ಚರಿ ಪಟು ಶೀತಲ್‌ ದೇವಿ ಅವರು ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನ ಗೆದ್ದಿದ್ದರು. ಈ ಸಾಧನೆ ಮಾಡಿದ  ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT