ಬೆಂಗಳೂರು: ಆಂಧ್ರಪ್ರದೇಶ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು, ‘ತಮಗೆ ವೈಎಸ್‌ಆರ್ ಕಾಂಗ್ರೆಸ್‌ನವರು ತೀವ್ರ ಅವಮಾನ ಮಾಡಿದ್ದಾರೆ. ಪುನಃ ನಾನು ಅಧಿಕಾರ ಹಿಡಿದೇ ವಿಧಾನಸೌಧ ಪ್ರವೇಶ ಮಾಡುತ್ತೇನೆ’ ಎಂದು ಕಣ್ಣೀರು ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಹಾಗೂ ನಟಿ ರೋಜಾ (ರೋಜಾ ಸೇಲ್ವಮಣಿ) ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ನಾಯ್ಡು ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವ ರೋಜಾ, ‘ಬಾಬು ಇಂದು ನಿನಗೆ ಯಾವ ಪರಿಸ್ಥಿತಿ ಬಂದಿದೆಯೋ ಅದು ನಿನ್ನ ಕರ್ಮದ ಫಲ. ಅದನ್ನು ನೀನು ಅನುಭವಿಸಲೇಬೇಕು’ ಎಂದು ಹೇಳಿದ್ದಾರೆ.

‘ಇಂದು ಯಾರೋ ಏನೋ ಎಂದರು ಎಂದು ನೀನು ಕಣ್ಣೀರು ಹಾಕಿದರೇ ಜನ ನಿನ್ನನ್ನು ನಂಬಲು ತಯಾರಿಲ್ಲ. ಇಂದಿನ ನಿನ್ನ ಪರಿಸ್ಥಿತಿ ನೋಡಿ ನನಗೆ ತುಂಬಾ ಖುಷಿಯಾಗಿದೆ. ಏಕೆಂದರೆ ಹೈದರಾಬಾದ್ ವಿಧಾನಸಭೆಯಲ್ಲಿ ನೀನು ನಂಗೆ ಏನು ಮಾಡಿದೆ ಎನ್ನುವುದು ನೆನಪಿದೆಯೇ? ಒಬ್ಬ ಮಹಿಳೆ ಎನ್ನುವುದನ್ನೂ ಮರೆತು, ಬ್ಲೂ ಫಿಲಂನಲ್ಲಿ ನಟಿಸಿದ್ದಾಳೆ ಎಂದು ಅವಮಾನಿಸಿದೆ’ ಎಂದು ತೆಲುಗಿನಲ್ಲಿ ಮಾತನಾಡಿರುವ ವಿಡಿಯೊವನ್ನು ರೋಜಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಹೇ ಚಂದ್ರಬಾಬು ವಿಧಿ ಯಾರನ್ನೂ ಸುಮ್ಮನೇ ಬಿಡುವುದಿಲ್ಲ. ವಿಧಿ ಎಲ್ಲರಿಗೂ ಪಾಠ ಕಲಿಸುತ್ತದೆ. ಎನ್‌ಟಿಆರ್ ಅವರಿಗೆ ನೀನು ಎಷ್ಟು ಕಣ್ಣೀರು ತರಿಸಿದ್ದಿ ಎಂಬುದನ್ನು ಮರೆತೆಯಾ? ಜಗನ್ಮೋಹನ್ ರೆಡ್ಡಿ ಅವರ ಕುಟುಂಬಕ್ಕೆ ನೀನು ಮಾಡಿರುವ ಅವಮಾನವನ್ನು ಜನ ಮರೆತಿಲ್ಲ. ವಿಧಾನಸೌಧಕ್ಕೆ ಬರುವುದಿಲ್ಲ ಎಂದು ಹೇಳಿದ್ದೀಯಾ. ನನಗೆ ತುಂಬಾ ಖುಷಿಯಾಗುತ್ತಿದೆ. ಬೈ ಬೈ ಬಾಬು’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಟಿಡಿಪಿ ಅಧಿಕಾರಕ್ಕೆ ಬಂದ ನಂತರವೇ ಸದನಕ್ಕೆ ಪ್ರವೇಶ: ನಾಯ್ಡು ಪ್ರತಿಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.