ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲಿಘಿ ಜಮಾತ್: ಎರಡು ವರ್ಷದ ಬಳಿಕ ತೆರೆದ ನಿಜಾಮುದ್ದೀನ್ ಮರ್ಕಜ್‌ ಮಸೀದಿ

Last Updated 17 ಮಾರ್ಚ್ 2022, 12:25 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮ ನಡೆಸಿತ್ತು ಎಂಬ ಆರೋಪದ ಮೇರೆಗೆ ಕಳೆದ 2 ವರ್ಷಗಳಿಂದ ಬಂದ್ ಆಗಿದ್ದ ದೆಹಲಿಯ ನಿಜಾಮುದ್ದೀನ್‌ ಮರ್ಕಜ್ ಮಸೀದಿ ಗುರುವಾರ ಪುನರಾರಂಭವಾಗಿದೆ.

ಶಬ್-ಇ-ಬರಾತ್‌ ಹಿನ್ನೆಲೆಯಲ್ಲಿ ಭಕ್ತರ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ದೆಹಲಿ ಹೈಕೋರ್ಟ್ ಮಸೀದಿ ಪುನರಾರಂಭಕ್ಕೆ ಬುಧವಾರ ಹಸಿರು ನಿಶಾನೆ ತೋರಿತ್ತು. ಹೀಗಾಗಿ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಮಸೀದಿಯನ್ನು ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2020ರ ಮಾರ್ಚ್‌ನಲ್ಲಿ ಕೊರೊನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ತಬ್ಲಿಘಿ ಜಮಾತ್‌ ಸಮಾವೇಶ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವರಿಗೆ ಕೋವಿಡ್‌ ತಗುಲಿ, ದೇಶದ ನಾನಾ ಭಾಗಗಳಿಗೆ ಹರಡುವಂತಾಯಿತು ಎಂಬ ಆರೋಪದ ಕಾರಣಕ್ಕೆ ಈ ಮಸೀದಿ ವಿವಾದದ ಕೇಂದ್ರ ಬಿಂದುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT