ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

AI ಎಂದಿಗೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ: ಐಎಂಎ

Published 1 ಮೇ 2024, 10:47 IST
Last Updated 1 ಮೇ 2024, 10:47 IST
ಅಕ್ಷರ ಗಾತ್ರ

ನವದೆಹಲಿ: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್‌.ವಿ. ಅಶೋಕನ್ ಹೇಳಿದ್ದಾರೆ.

ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.

‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.

ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ. ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.

‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.

ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.

‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೇಶಕ್ಕೆ ಬಹಳ ವಿಶೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.

ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.

AI cannot replace doctors, says IMA chief

ನವದೆಹಲಿ: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್‌.ವಿ. ಅಶೋಕನ್ ಹೇಳಿದ್ದಾರೆ.

ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.

‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.

ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.

‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.

ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.

‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೆಶಕ್ಕೆ ಬಹಳ ವಿಸೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.

ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT