ನವದೆಹಲಿ: ಅಹಮದಾಬಾದ್ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ (ಎಐ171) ಅಪಘಾತ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ವಿಮಾನ ಅಪಘಾತ ತನಿಖಾ ಸಂಸ್ಥೆ(ಎಎಐಬಿ) ಗುರುವಾರ ಹೇಳಿದೆ.

ತನಿಖೆಯು ಪೂರ್ಣಗೊಂಡಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿರುವ ಕಾರಣಕ್ಕೆ ಈ ಸ್ಪಷ್ಟನೆ ನೀಡಿರುವ ಎಎಐಬಿ,‘ಈ ವಿಚಾರವಾಗಿ ಮಾಧ್ಯಮಗಳಲ್ಲಿನ ವರದಿಗಳು ತಪ್ಪು ಹಾಗೂ ಊಹಾಪೋಹಗಳಿಂದ ಕೂಡಿವೆ’ ಎಂದು ಹೇಳಿದೆ.

‘ವಿಮಾನ ಅಪಘಾತ ಕುರಿತ ತನಿಖೆಯು ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ಅಪಘಾತಕ್ಕೆ ಕಾರಣವಾದ ಅಂಶಗಳು ಯಾವುವು ಹಾಗೂ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ವಿಮಾನ ಅಪಘಾತ ಕುರಿತು ವರದಿಗಳನ್ನು ಪ್ರಕಟಿಸುವಾಗ ಮಾಧ್ಯಮಗಳು ಸಂಯಮ ಕಾಪಾಡಬೇಕು ಹಾಗೂ ಊಹಾಪೋಹಗಳಿಗೆ ಈಡಾಗಬಾರದು. ಖಚಿತವಲ್ಲದ ವರದಿಗಳು ಜನರಲ್ಲಿ ಅನಗತ್ಯ ಆತಂಕಕ್ಕೆ ಕಾರಣವಾಗುತ್ತವೆ ಹಾಗೂ ತನಿಖೆಯ ವಿಶ್ವಾಸಾರ್ಹತೆ ಮೇಲೂ ಪರಿಣಾಮ ಬೀರಲಿವೆ’ ಎಂದು ಎಎಐಬಿ ಹೇಳಿದೆ.

ಈ ವಿಮಾನ ಅಪಘಾತದಲ್ಲಿ 260 ಜನರು ಮೃತಪಟ್ಟಿದ್ದರು. ಲಂಡನ್ಗೆ ಹೊರಟಿದ್ದ ಈ ನತದೃಷ್ಟ ವಿಮಾನ ಅಹಮದಾಬಾದ್ ವಿಮಾನನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.