ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಿಮಾನಯಾನ ಸಂಸ್ಥೆ, ವಿಮಾನ ನಿಲ್ದಾಣಗಳನ್ನು ಸರ್ಕಾರ ನಡೆಸುವುದಿಲ್ಲ'

Last Updated 31 ಆಗಸ್ಟ್ 2020, 2:45 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರವು ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.

ಇದೇ ವರ್ಷ 'ಏರ್ ಇಂಡಿಯಾ' ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

'ಏರ್ ಇಂಡಿಯಾ ಸರ್ಕಾರದ ಸ್ವತ್ತು, ಅದರಲ್ಲಿ ಅತ್ಯುತ್ತಮ ತರಬೇತಿ ಪಡೆದಿರುವ ವೃತ್ತಿಪರರಿದ್ದಾರೆ, ಉತ್ತಮ ಸೇವೆಗಳನ್ನು ನೀಡಿರುವ ಹಿನ್ನೆಲೆ ಹೊಂದಿದೆ. ಆದರೆ, ಸರ್ಕಾರವು ‌ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳನ್ನು ನಡೆಸುವುದಿಲ್ಲ. ವಾಣಿಜ್ಯ ಘಟಕಗಳಿಗೆ ಸರ್ಕಾರದ ನಿಯಮಗಳು ಅನ್ವಯವಾಗಲಿವೆ' ಸಚಿವ ಹರ್ದೀಪ್ ಸಿಂಗ್ ಪುರಿ ಸಭೆಯಲ್ಲಿ ತಿಳಿಸಿದ್ದಾರೆ.

'ಏರ್ ಇಂಡಿಯಾದಲ್ಲಿ ಪಾಲುದಾರಿಕೆ ಮಾರಾಟಕ್ಕಾಗಿ ಪ್ರಕಟಿಸಿದ್ದ ಪ್ರಸ್ತಾವನೆಯನ್ನು ಕೋವಿಡ್ ಪರಿಸ್ಥಿತಿಯ ಕಾರಣ ಅಕ್ಟೋಬರ್ 30ರ ವರೆಗೂ ವಿಸ್ತರಿಸಲಾಗಿದೆ. 2020ರಲ್ಲಿಯೇ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ಇದೆ' ಎಂದಿದ್ದಾರೆ.

ಜೂನ್ 25ರಂದು ಹೊರಡಿಸಿದ್ದ ಪ್ರಕಟಣೆಯ‌ ಪ್ರಕಾರ, ಏರ್ ಇಂಡಿಯಾದಲ್ಲಿ ಹೂಡಿಕೆ ನಡೆಸಲು ಆಗಸ್ಟ್ 31 ಕೊನೆಯ‌ ದಿನವಾಗಿತ್ತು.

ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಹರ್ದೀಪ್ ಸಿಂಗ್ ಪುರಿ, 'ಕಾಂಗ್ರೆಸ್ ನೇತೃತ್ವದ ಆಡಳಿತಾವಧಿಯಲ್ಲಿ ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT