1950ರಿಂದ 2002ರ ವರೆಗೆ ಆರ್‌ಎಸ್‌ಎಸ್‌ನ ಮುಖ್ಯ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಗಸ್ಟ್ 15 ಮತ್ತು ಜನವರಿ 26ರಂದು ನಾಗ್ಪುರದಲ್ಲಿರುವ ಸಂಘಟನೆಯ ಎರಡು ಕ್ಯಾಂಪಸ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದೇವೆ. ಈ ಬಗ್ಗೆ ಯಾರೊಬ್ಬರು ನಮ್ಮನ್ನು ಪ್ರಶ್ನಿಸುವಂತಿಲ್ಲ’ ಎಂದರು.