ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆಗೆ ಕಾಶ್ಮೀರಿ ಯುವಕರ ನೆರವು: ಭದ್ರತಾ ಪಡೆ ಎಚ್ಚರಿಕೆ

Last Updated 7 ಫೆಬ್ರುವರಿ 2021, 11:29 IST
ಅಕ್ಷರ ಗಾತ್ರ

ಶ್ರೀನಗರ: ಅಲ್ಪಾವಧಿ ವೀಸಾ ಬಳಸಿಕೊಂಡು ಪಾಕಿಸ್ತಾನಕ್ಕೆ ತೆರಳಿದ್ದ ಕಾಶ್ಮೀರದ ಹಲವು ಯುವಕರು, ಭಯೋತ್ಪಾದಕ ಜಾಲವನ್ನು ಸೇರಿರುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆ ಎಚ್ಚರಿಕೆ ನೀಡಿದೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ನೂರಕ್ಕೂ ಹೆಚ್ಚು ಕಾಶ್ಮೀರಿ ಯುವಕರಲ್ಲಿ ಕೆಲವರು ಮರಳಿ ಬಂದಿಲ್ಲ. ಮರಳಿ ಬಂದವರಲ್ಲಿ ಹಲವರು ಕಣ್ಮರೆಯಾಗಿದ್ದಾರೆ. ಈ ಯುವಕರು ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ಭಯೋತ್ಪಾದಕ ಗುಂಪುಗಳಿಗೆ ಗೋಪ್ಯವಾಗಿ ಸಹಾಯ ಮಾಡುತ್ತಿರುವ ಆತಂಕ ಎದುರಾಗಿದೆ ಎಂದು ಮಾಹಿತಿ ನೀಡಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಉತ್ತರ ಕಾಶ್ಮೀರದ ಗಡಿ ಪ್ರದೇಶದ ಹಂದ್ವಾರ ಅರಣ್ಯ ಪ್ರದೇಶದಲ್ಲಿ ಐವರು ಭಯೋತ್ಪಾದಕರು ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು. ಅದರಲ್ಲಿ ಒಬ್ಬಾತ ಸ್ಥಳೀಯ ನಿವಾಸಿಯಾಗಿದ್ದು, ಆತನ 2018ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ. ನಂತರ, ಆತ ಮರಳಿ ಬಂದಿರಲಿಲ್ಲ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಏಪ್ರಿಲ್ 1ರಿಂದ 6ನೇ ತಾರೀಖಿನ ನಡುವೆ, ದಕ್ಷಿಣ ಕಾಶ್ಮೀರದ ಶೋಫಿಯಾನ್, ಕುಲ್ಗಾಮ್ ಮತ್ತು ಅನಂತ್‌ನಾಗ್ ಜಿಲ್ಲೆಗಳ ಹಲವು ಯುವಕರು ಭಯೋತ್ಪಾದಕ ಕೃತ್ಯಕ್ಕೆ ನೆರವು ನೀಡಿರುವುದು ಕಂಡುಬಂದಿದೆ. ಅವರೆಲ್ಲ ಅಧಿಕೃತ ದಾಖಲೆಗಳನ್ನು ಬಳಸಿಯೇ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ ದೇಶಕ್ಕೆ ಹಿಂದಿರುಗಿ ಬಂದಿಲ್ಲ ಎಂದು ಭದ್ರತಾ ಪಡೆ ಮಾಹಿತಿ ನೀಡಿದೆ.

ಕಳೆದ ಮೂರು ವರ್ಷಗಳಲ್ಲಿ ಏಳು ದಿನಗಳಿಗಿಂತ ಹೆಚ್ಚು ಅವಧಿಯವರೆಗೆ ಅಧಿಕೃತ ವೀಸಾ ಬಳಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಕಾಶ್ಮೀರಿ ಯುವಕರ ಮಾಹಿತಿಯನ್ನು ‌‌ಭದ್ರತಾ ಏಜೆನ್ಸಿ, ದೆಹಲಿ ವಿಮಾನ ನಿಲ್ದಾಣ ಮತ್ತು ವಾಘಾ ಗಡಿಯ ವಲಸೆ ಅಧಿಕಾರಿಗಳು ಜಂಟಿಯಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT