ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಸಂಪೂರ್ಣ ಮಹಿಳಾ ಸಿಬ್ಬಂದಿಯ ‘ಪೊಲೀಸ್ ಪೋಸ್ಟ್‌’ ಪ್ರಾರಂಭ

Published 18 ಫೆಬ್ರುವರಿ 2024, 13:07 IST
Last Updated 18 ಫೆಬ್ರುವರಿ 2024, 13:07 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿಯ ಖಾನ್‌ ಮಾರ್ಕೆಟ್‌ ಪ್ರದೇಶದ ಬಳಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಎರಡು ‘ಪೊಲೀಸ್‌ ಪೋಸ್ಟ್‌’ಗಳು ಭಾನುವಾರ ಕಾರ್ಯಾರಂಭವಾದವು.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಹಾಗೂ ಪೊಲೀಸ್ ಕಮಿಷನರ್ ಸಂಜಯ್ ಅರೊರಾ ಈ ಪೊಲೀಸ್ ಕೇಂದ್ರಗಳನ್ನು ಉದ್ಘಾಟಿಸಿದರು. 

‘ದೆಹಲಿ ಪೊಲೀಸರ ಈ ಐತಿಹಾಸಿಕ ಕೆಲಸವು ನನಗೆ ಸಂತಸ ತಂದಿದೆ. ತೊಂದರೆಗೆ ಒಳಗಾಗುವ ಮಹಿಳೆಯರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಮಹಿಳಾ ಪೊಲೀಸರಲ್ಲಿ ಹೇಳಿಕೊಳ್ಳಬಹುದು’ ಎಂದು ಸಕ್ಸೇನಾ ಪ್ರತಿಕ್ರಿಯಿಸಿದರು. 

ಗಣರಾಜ್ಯೋತ್ಸವದ ದಿನ ನಡೆದ ಪರೇಡ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನವಾಗಿತ್ತು. ಆ ದಿನವೇ ಎಲ್ಲ ಮಹಿಳಾ ಸಿಬ್ಬಂದಿಯೇ ಇರುವ ‘ಪೊಲೀಸ್‌ ಪೋಸ್ಟ್‌’ಗಳನ್ನು ಪ್ರಾರಂಭಿಸುವಂತೆ ದೆಹಲಿ ಪೊಲೀಸರಿಗೆ ಸಕ್ಸೇನಾ ಸಲಹೆ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT