ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Shahi Idgah: ಕೃಷ್ಣ ಜನ್ಮಭೂಮಿ ಎಂದು ಘೋಷಿಸಲು ಅಲಹಾಬಾದ್ ಹೈಕೋರ್ಟ್‌ ನಕಾರ

Published 12 ಅಕ್ಟೋಬರ್ 2023, 7:02 IST
Last Updated 12 ಅಕ್ಟೋಬರ್ 2023, 7:02 IST
ಅಕ್ಷರ ಗಾತ್ರ

‍ಪ್ರಯಾಗರಾಜ್‌: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಶಾಹಿ ಇದ್ಗಾ ಮಸೀದಿ ಇರುವ ಸ್ಥಳವನ್ನು ಕೃಷ್ಣನ ಜನ್ಮಸ್ಥಳವೆಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ.

ವಕೀಲರಾದ ಮಹೆಕ್‌ ಮಹೇಶ್ವರ್‌ ಅವರು ಸಲ್ಲಿಸಿದ್ದ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿ ಪಿಟಿನ್‌ಕರ್‌ ದಿವಾಕರ್‌ ಹಾಗೂ ನ್ಯಾಯಮೂರ್ತಿ ಅಶುತೋಷ್‌ ಶ್ರೀವಾತ್ಸವ ಅವರಿದ್ದ ವಿಭಾಗೀಯ ಪೀಠ ವಜಾ ಮಾಡಿತು.

‌ಈ ಹಿಂದೆ ಸೆ. 4 ರಂದು ತೀರ್ಪು ನೀಡುವುದಾಗಿ ಹೈಕೋರ್ಟ್ ಹೇಳಿತ್ತು.

ಶಾಹಿ ಈದ್ಗಾ ಮಸೀದಿಯು ಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ನಿರ್ಮಿಸಲಾಗಿದ್ದು, ಹೀಗಾಗಿ ಅ‌ದನ್ನು ತೆರವುಗೊಳಿಸಬೇಕು ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿತ್ತು.

ಈ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಹಾಗೂ ಅಲ್ಲಿ ದೇಗುಲ ನಿರ್ಮಿಸಲು ಟ್ರಸ್ಟ್‌ ರಚನೆ ಮಾಡಿ ಆದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿಯನ್ನು ವಿಲೇವಾರಿ ಮಾಡುವವರೆಗೂ ಕೃಷ್ಣ ಜನ್ಮಾಷ್ಠಮಿಯ ವೇಳೆಯಲ್ಲಿ ವಾರದ ನಿರ್ದಿಷ್ಟ ದಿನಗಳಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಮಾಡಿಕೊಡಬೇಕು. ಜತೆಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್‌ಐ) ಉತ್ಖನನವೂ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT