ಲಖನೌ: ಎಲ್ಲ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಲು ಆಗುವುದಿಲ್ಲ ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್, ಈ ನಿಟ್ಟಿನಲ್ಲಿ ‘ನಿರ್ಭಯಾ’ ಪ್ರಕರಣ ಒಂದು ವಿನಾಯಿತಿ ಎಂದು ಹೇಳಿದೆ.

ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರ ಮನಸ್ಸಿನ ಮೇಲಿನ ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳನ್ನು ಸರಿಯಾಗಿ ಪರಿಗಣಿಸದೇ ವಯಸ್ಕರಂತೆ ವಿಚಾರಣೆಗೆ ಒಳಪಡಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಈ ನಿಟ್ಟಿನಲ್ಲಿ ‘ನಿರ್ಭಯಾ’ ಪ್ರಕರಣ ಒಂದು ಅಪವಾದವೇ ಹೊರತು, ಸಾಮಾನ್ಯ ನಿಯಮವಲ್ಲ ಎಂದು ನ್ಯಾಯಮೂರ್ತಿ ಸಿದ್ಧಾರ್ಥ ಅವರ ಏಕ ಸದಸ್ಯ ಪೀಠ ಹೇಳಿದೆ.

ಬಾಲಕಿ ಜತೆಗೆ ಸಮ್ಮತಿಯ ಲೈಂಗಿಕ ಸಂಬಂಧದ ಪ್ರಕರಣದಲ್ಲಿ ತನ್ನನ್ನು ವಯಸ್ಕ ಎಂದು ವಿಚಾರಣೆಗೆ ಒಳಪಡಿಸಲು ವಿಚಾರಣಾ ನ್ಯಾಯಾಲಯ ಮತ್ತು ಬಾಲ ನ್ಯಾಯ ಮಂಡಳಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

16 ವರ್ಷದ ಅರ್ಜಿದಾರನ ಐಕ್ಯು ಮಟ್ಟ 66, ಮಾನಸಿಕ ವಯಸ್ಸು ಆರು ವರ್ಷ ಎಂದು ಹೇಳುವ ಆತನ ಮಾನಸಿಕ ಮೌಲ್ಯಮಾಪನ ವರದಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಮಂಡಳಿಯು ಗಣನೆಗೆ ತೆಗೆದುಕೊಂಡಿಲ್ಲ ಎಂದು ಪೀಠ ಇದೇ ವೇಳೆ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.