ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ತಾರಾ ಪ್ರಚಾರಕರೊಬ್ಬರು ಗೋವಾಕ್ಕೆ ಬಂದು ಸಭೆ ನಡೆಸಲಿದ್ದಾರೆ. ಗೋವಾ ವಿಧಾನಸಭೆಯ ಎಲ್ಲ 40 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಪೊಂಡಾ, ಸಾನ್ವೋಡ್ಡೆಮ್ ಮತ್ತು ವಾಸ್ಕೊ ಕ್ಷೇತ್ರಗಳಲ್ಲಿ ಕ್ರಮವಾಗಿ ರವಿ ನಾಯ್ಕ್, ಗಣೇಶ್ ಗಾಂವ್ಕರ್ ಮತ್ತು ದಾಜಿ ಸಲ್ಕಾರ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.