ಚಂಡೀಗಡ, ಹರಿಯಾಣ: ಕೆರೆಗಳನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಅಮೃತ್ ಸರೋವರ ಯೋಜನೆಯು ಭಗೀರಥ ಪ್ರಯತ್ನ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿದರು.

ಸೋನಿಪತ್ ಜಿಲ್ಲೆಯ ನಹ್ರಾ ಗ್ರಾಮದಲ್ಲಿ ರಾಜ್ಯ ಮಟ್ಟದ ಅಮೃತ್ ಸರೋವರ ಯೋಜನೆಗೆ ವಿಡಿಯೊ ಚಾಲನೆ ನೀಡಿದ ಖಟ್ಟರ್, ‘ಭಗೀರಥನು ತನ್ನ ಅರ್ಪಣಾ ಭಾವ ಹಾಗೂ ಸತತ ಪ್ರಯತ್ನದಿಂದ ಗಂಗಾ ನದಿಯನ್ನು ಸ್ವರ್ಗದಿಂದ ಭೂಮಿಗೆ ತಂದಂತೆ, ಅಮೃತ್ ಸರೋವರ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಮೋದಿ ಅವರು ಕೊಳಗಳನ್ನು ಉಳಿಸಲು ಭಗೀರಥನ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ನೀರು ಆರೋಗ್ಯಕರ ಭೂಮಿಯ ಮೂಲಾಧಾರ. ನಮ್ಮ ಮುಂದಿನ ಪೀಳಿಗೆಗೆ ನೀರಿಲ್ಲದ ಬಂಜರು ಭೂಮಿಯನ್ನು ನೀಡಲು ಇಚ್ಛಿಸುವುದಿಲ್ಲ. ಪ್ರತಿಯೊಂದು ನೀರಿನ ಹನಿಯನ್ನು ಸಂರಕ್ಷಣೆ ಮಾಡಿ ಬಳಸಲಾಗುವುದು’ ಎಂದು ಖಟ್ಟರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರನ್ನು ಉದ್ದೇಶಿಸಿ, ‘ದೇಶದಾದ್ಯಂತ ಪ್ರತಿ ಜಿಲ್ಲೆಯ 75 ಕೆರೆಗಳನ್ನು ಸ್ವಚ್ಛಗೊಳಿಸಲು ಮೋದಿ ಅವರು ರಾಷ್ಟ್ರಕ್ಕೆ ಕರೆ ನೀಡಿದ್ದಾರೆ. ಇದು ಇಂದಿನ ಕಾರ್ಯಕ್ರಮದ ಒಂದು ಭಾಗವೂ ಹೌದು’ ಎಂದರು.

ಭಾರತದೊಂದಿಗೆ ಯುರೋಪಿಯನ್ ಪಾಲುದಾರರ ಪಾತ್ರ ಮಹತ್ವದ್ದು: ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.