ಠಾಣೆ: ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಹಣ ದೋಚಿದ ಪ್ರಕರಣದ ಪ್ರಮುಖ ಆರೋಪಿ, ಠಾಣೆಯ ಮಾನ್ಪಾಡಾ ನಿವಾಸಿ ಅಂಕಿತ್ ಬಾಪು ಥೋಂಬ್ರೆ (40) ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕರ್ನಾಟಕದ ಶಿವಮೊಗ್ಗದ ಉದ್ಯಮಿ ಶಮಂತ್ಕುಮಾರ್ ಷಡಕ್ಷರಪ್ಪ ಕೆ. (31) ಎಂಬವರಿಗೆ ಡಿಸೆಂಬರ್ 15ರಂದು ಅಂಕಿತ್ ಕರೆ ಮಾಡಿದ್ದ. ಶಮಂತ್ಕುಮಾರ್ ಅವರ ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿ ಠಾಣೆ ಜಿಲ್ಲೆಯ ಕಾಶಿಮಿರಾಗೆ ಪಯಣ ಬೆಳೆಸಿದ್ದರು. ಆರೋಪಿಗಳು ಕಳೆದ ವರ್ಷ ಡಿಸೆಂಬರ್ 15 ಮತ್ತು 18ರ ನಡುವೆ ವಿವಿಧ ಹೋಟೆಲ್ಗಳಿಗೆ ಕರೆದೊಯ್ದು ಅಲ್ಲಿ ಕೂಡಿಹಾಕಿದ್ದರು.

ಆರೋಪಿಗಳು ಉದ್ಯಮಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಲ್ಲದೆ, ಅವರ ಸಹಚರರು ಚಾಕುವಿನಿಂದ ಹಲ್ಲೆ ನಡೆಸಿದ್ದರು. ನೆಟ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಯಿಂದ ₹2,17,63,287 ಮೊತ್ತವನ್ನು ಅನಧಿಕೃತ ಆನ್ಲೈನ್ ವಹಿವಾಟುಗಳಿಗೆ ಬಳಕೆ ಮಾಡಿದ್ದಾರೆ’ ಎಂದು ಎಸಿಪಿ (ಅಪರಾಧ) ಮದನ್ ಬಲ್ಲಾಳ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.