ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple Warning | ವಿಪಕ್ಷ ನಾಯಕರ ಐಫೋನ್ ಹ್ಯಾಕ್ ಯತ್ನ: ಆ್ಯಪಲ್ ಹೇಳಿದ್ದೇನು?

Published 31 ಅಕ್ಟೋಬರ್ 2023, 9:28 IST
Last Updated 31 ಅಕ್ಟೋಬರ್ 2023, 9:28 IST
ಅಕ್ಷರ ಗಾತ್ರ

ನವದೆಹಲಿ: ಐಫೋನ್‌ ಹ್ಯಾಕ್‌ ಪ್ರಯತ್ನ ಸಂಬಂಧ ವಿರೋಧ ಪಕ್ಷಗಳ ನಾಯಕರಿಗೆ ಕಳಿಸಿರುವ ಸಂದೇಶದ ಬಗ್ಗೆ ಆ್ಯಪಲ್ ಪ್ರತಿಕ್ರಿಯೆ ನೀಡಿದೆ. ಇದು ಯಾವುದೇ ನಿರ್ದಿಷ್ಟ ದೇಶದ ಸರ್ಕಾರದ ದಾಳಿ ಎಂದು ಹೇಳಲು ಬರುವುದಿಲ್ಲ ಎಂದಿದೆ. ಅಲ್ಲದೆ ಈ ಎಚ್ಚರಿಕೆಗೆ ಕಾರಣ ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೆಲವು ಎಚ್ಚರಿಕೆಯ ಸಂದೇಶಗಳು ತಪ್ಪು ಮಾಹಿತಿ ಆಗಿರಬಹುದು, ಇನ್ನು ಕೆಲವು ದಾಳಿಗಳು ಗೊತ್ತಾಗದೇ ಇರಬಹುದು ಎಂದು ಆ್ಯಪಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ನಿರ್ದಿಷ್ಟ ಸರ್ಕಾರದಿಂದ ಹ್ಯಾಕಿಂಗ್ ಯತ್ನ ನಡೆದಿದೆ ಎಂದು ಹೇಳಲು ಬರುವುದಿಲ್ಲ. ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ ಎಂದು ಆ್ಯ‍ಪಲ್ ಹೇಳಿದೆ.

ಸರ್ಕಾರಿ ಪ್ರಯೋಜಿತ ಹ್ಯಾಕರ್‌ಗಳಿಂದ ನಿಮ್ಮ ಐಫೋನ್‌ಗಳ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ, ಶಶಿ ತರೂರ್, ಮಹುವಾ ಮೊಯಿತ್ರಾ ಸಹಿತ ಹಲವು ವಿರೋಧ ‍‍ಪಕ್ಷಗಳ ನಾಯಕರಿಗೆ ಆ್ಯಪಲ್ ಸಂದೇಶ ಕಳುಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT