ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದವರ ವಿರುದ್ಧ ಚಾಟಿ ಬೀಸಿರುವಸೇನಾ ಮುಖ್ಯಸ್ಥ ಬಿಪಿನ್ ರಾವತ್, ನಾಯಕತ್ವದ ಪಾಠ ಮಾಡಿದ್ದಾರೆ.

‘ಜನರನ್ನು ತಪ್ಪದಾರಿಯಲ್ಲಿ ಮುನ್ನಡೆಸುವವನುನಾಯಕನಾಗುವುದಿಲ್ಲ.ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಂಡಿದ್ದೇವೆ.ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಹಿಂಸಾತ್ಮಕ ಕೃತ್ಯಕ್ಕಾಗಿಜನರನ್ನುಬಳಸಿಕೊಂಡಿದ್ದಾರೆ. ಇದನ್ನು ನಾಯಕತ್ವ ಎನ್ನವುದಿಲ್ಲ’ ಎಂದು ಹೇಳಿದ್ದಾರೆ.

‘ನಾಯಕತ್ವದಲ್ಲಿ ಮುಂದಾಳತ್ವ ವಹಿಸುವುದು ಸುಲಭದ ಕೆಲಸವಲ್ಲ. ನೀವು ಇಡುವ ಒಂದು ಹೆಜ್ಜೆಯನ್ನು, ಹಿಂದಿರುವ ಸಮೂಹ ಹಿಂಬಾಲಿಸುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಾಯಕನ ಮೇಲಿರುತ್ತದೆ. ಹಾಗಾಗಿ ನಾಯಕತ್ವ ಎನ್ನುವುದುಕಾಣಿಸುವಷ್ಟು ಸುಲಭದ ಕೆಲಸವಲ್ಲ’ ಎಂದು ತಿಳಿಸಿದರು.

ಸೇನಾ ಮುಖ್ಯಸ್ಥರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಎಐಎಂಇಐಎಂ ಮುಖ್ಯಸ್ಥ ಅಸಾದುದ್ದೀನ್ಓವೈಸಿ, ಸೇನಾ ಮುಖ್ಯಸ್ಥರಿಗೆ ನಾಯಕತ್ವದ ಪಾಠ ಮಾಡಿದ್ದಾರೆ.

‘ಒಬ್ಬರ ಕಚೇರಿಯ ಮಿತಿಗಳನ್ನು ತಿಳಿಯುವುದು ನಾಯಕತ್ವ. ನಾಗರಿಕರ ಪ್ರಾಬಲ್ಯ ಮತ್ತು ಮುಖ್ಯಸ್ಥರಾಗಿರುವ ಸಂಸ್ಥೆಯ ಸಮಗ್ರತೆ ಕಾಪಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ನಾಯಕತ್ವ ಎನಿಸುತ್ತದೆ’ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.