ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅನಿತ್‌ ರೆಡ್ಡಿ ಸೇರಿ 25 ಕಲಾವಿದರಿಗೆ ಹುಂಡೈ ಪ್ರಶಸ್ತಿ

Last Updated 13 ಮಾರ್ಚ್ 2022, 11:48 IST
ಅಕ್ಷರ ಗಾತ್ರ

ನವದೆಹಲಿ: ಹುಂಡೈ ಮೋಟಾರ್‌ ಇಂಡಿಯಾ ಫೌಂಡೇಶನ್‌ (ಎಚ್‌ಎಂಐಎಫ್‌) ಆಯೋಜಿಸಿರುವ ‘ಆರ್ಟ್‌ ಫಾರ್‌ ಹೋಪ್‌’ ಕಾರ್ಯಕ್ರಮದಡಿ ಕರ್ನಾಟಕದ ಅನಿತ್‌ ರೆಡ್ಡಿ ಸೇರಿದಂತೆ ದೇಶದ 25 ಕಲಾವಿದರನ್ನು ₹ 1 ಲಕ್ಷ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಸಾಂಪ್ರದಾಯಿಕ ಕರಕುಶಲಕರ್ಮಿಗಳು, ಸಣ್ಣ ಕಲಾ ಉದ್ಯಮ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಾಲ್ಕು ದಿನಗಳ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ಇದು ಮಾರ್ಚ್‌ 15ರ ವರೆಗೂ ಇರಲಿದೆ. ಮಾನವೀಯತೆಯಪ್ರಗತಿಯಾಗಬೇಕು ಎಂದು ಜಾಗತಿಕ ದೃಷ್ಟಿಕೋನದಿಂದ ಕರ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಆರ್ಟ್‌ ಫಾರ್‌ ಹೋಪ್‌ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹುಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್‌ ಉಪಾಧ್ಯಕ್ಷ(ಕಾರ್ಪೋರೆಟ್‌ ವ್ಯವಹಾರ) ಸಹಾಯಕ ಉಪಾಧ್ಯಕ್ಷ ಪುನೀತ್‌ ಆನಂದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT