ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ಸ್‌ಗೆ ಉತ್ತರಿಸದೆ ತಮ್ಮ ಬಂಧನವನ್ನು ಕೇಜ್ರಿವಾಲ್ ಆಹ್ವಾನಿಸಿಕೊಂಡರು: ಹಿಮಂತ

Published 24 ಮಾರ್ಚ್ 2024, 5:15 IST
Last Updated 24 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಗುವಾಹಟಿ: ಸಮನ್ಸ್‌ಗಳಿಗೆ ಉತ್ತರಿಸಿದೆ ತಮ್ಮನ್ನು ಬಂಧಿಸುವಂತೆ ಅರವಿಂದ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ ಖುದ್ದು ಆಹ್ವಾನ ನೀಡಿದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದರು.

ರಾಜಕೀಯ ಸಹಾನುಭೂತಿ ಪಡೆಯಲು ಅವರು ಮಾಡಿದ ಉಪಾಯ ಆಗಿರಲೂಬಹುದು ಎಂದು ಅವರು ಅಭಿಪ್ರಾಯಪಟ್ಟರು.

‘ಒಬ್ಬ ವ್ಯಕ್ತಿಯು ಇ.ಡಿಯ 9 ಸಮನ್ಸ್‌ಗಳನ್ನು ನಿರ್ಲಕ್ಷಿಸಿದ ಎಂದಾದರೆ, ಅದು ಬಂಧನಕ್ಕೆ ಉದ್ದೇಶಪೂರ್ವಕವಾಗಿ ಆಹ್ವಾನ ನೀಡಿದಂತೆ. ಒಂದು ವೇಳೆ ಕೇಜ್ರಿವಾಲ್ ಆರಂಭಿಕ ಸಮನ್ಸ್‌ಗಳಿಗೆ ಉತ್ತರಿಸಿದರೆ, ಅವರ ಬಂಧನವಾಗುತ್ತಿರಲಿಲ್ಲ’ ಎಂದರು.

ಈ ಹಿಂದೆ ಇ.ಡಿ ಸಮನ್ಸ್‌ ನೀಡಿದಾಗ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೇಜ್ರಿವಾಲ್ ಅವರ ನಡವಳಿಕೆ ರೂಢಿ ತಪ್ಪಿತ್ತು ಎಂದು ಹೇಳಿದರು.

ಸಮನ್ಸ್‌ಗೆ ಉತ್ತರಿಸಲು ಕೇಜ್ರಿವಾಲ್ ನಿರಾಕರಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಾರ್ವಜನಿಕರಿಂದ ಸಹಾನುಭೂತಿಯನ್ನು ಪಡೆಯುವ ತಂತ್ರವಾಗಿರಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT