ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ

ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ( Dr Ravi Kannan R) ಅವರು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Published 1 ಸೆಪ್ಟೆಂಬರ್ 2023, 14:28 IST
Last Updated 1 ಸೆಪ್ಟೆಂಬರ್ 2023, 14:28 IST
ಅಕ್ಷರ ಗಾತ್ರ

ಗುವಾಹಟಿ: ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ( Dr Ravi Kannan R) ಅವರು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2023 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು ಅದರಲ್ಲಿ ರವಿ ಕಣ್ಣನ್ ಕೂಡ ಒಬ್ಬರು.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಷ್ಯಾದ ಅತ್ಯುನ್ನತ ಪ್ರಶಸ್ತಿಯಾಗಿದ್ದು ಏಷ್ಯಾದ ನೋಬೆಲ್ ಎಂದು ಗುರುತಾಗಿದೆ.

2007 ರಿಂದ ಅಸ್ಸಾಂನ Cachar Cancer Hospital and Research Centre (CCHRC) ನಿರ್ದೇಶಕರಾಗಿರುವ ರವಿ ಕಣ್ಣನ್, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖರಾಗಿದ್ದಾರೆ. 2007ರ ಮೊದಲು ರವಿ ಕಣ್ಣನ್ ಅವರು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದರು.

ರವಿ ಕಣ್ಣನ್ ಜೊತೆ EUGENIO LEMOS, MIRIAM CORONEAL ಹಾಗೂ KORVI RAKSHAND ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ Ramon Magsaysay Award Foundation ವತಿಯಿಂದ 1958ರಿಂದ ಕೊಡಲಾಗುತ್ತಿದೆ. ಏಷ್ಯಾದಲ್ಲಿ ಸರ್ಕಾರಿ, ಸಮುದಾಯ, ವಿದೇಶಿ ಬಾಂಧವ್ಯ, ಆರೋಗ್ಯ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ.

ಫಿಲಿಪ್ಪೀನ್ಸ್‌ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಈ ಪ್ರಶಸ್ತಿ ಕೊಡಲಾಗುತ್ತದೆ. ಸುಮಾರು ₹ 41 ಲಕ್ಷ (50,000 USD) ನಗದನ್ನು ಹೊಂದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT