ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಸರ್ಕಾರಿ ಮದರಸಗಳ ರದ್ದು: ಮಸೂದೆ ಮಂಡನೆ

Last Updated 28 ಡಿಸೆಂಬರ್ 2020, 12:18 IST
ಅಕ್ಷರ ಗಾತ್ರ

ಗುವಾಹಟಿ: ಸರ್ಕಾರಿ ಮದರಸಗಳನ್ನು ರದ್ದು ಮಾಡಿ, ಅವುಗಳನ್ನು 2021 ಏ.1ರಿಂದ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸುವ ಮಸೂದೆಯನ್ನು ಅಸ್ಸಾಂ ಸರ್ಕಾರ ಸೋಮವಾರ ಮಂಡಿಸಿತು.

ಸರ್ಕಾರದ ಈ ನಿರ್ಧಾರಕ್ಕೆ ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೂ, ಮೂರು ದಿನಗಳ ಚಳಿಗಾಲದ ಅಧಿವೇಶದ ಮೊದಲ ದಿನವೇ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಈ ಮಸೂದೆ ಮಂಡಿಸಿದರು.

ಪ್ರಸ್ತುತ ಇರುವ ಅಸ್ಸಾಂ ಮದರಸ ಕಾಯ್ದೆ 1995 ಹಾಗೂ ಅಸ್ಸಾಂ ಮದರಸ ಶಿಕ್ಷಣ ಕಾಯ್ದೆ 2018 ಅನ್ನು ರದ್ದುಗೊಳಿಸುವ ಪ್ರಸ್ತಾವವನ್ನು ಹೊಸ ಮಸೂದೆಯು ಒಳಗೊಂಡಿದೆ.

‘ಖಾಸಗಿ ಮದರಸಗಳನ್ನು ನಿಯಂತ್ರಿಸುವ ಅಥವಾ ಅವುಗಳನ್ನು ರದ್ದುಗೊಳಿಸುವುದು ಮಸೂದೆಯ ಉದ್ದೇಶವಲ್ಲ. ಮಸೂದೆಯಲ್ಲಿ ತಪ್ಪಾಗಿ ಖಾಸಗಿ ಎಂಬ ಪದದ ಬಳಕೆಯಾಗಿದೆ. ಸರ್ಕಾರಿ ಮದರಸಗಳನ್ನು ಪ್ರಾಥಮಿಕ, ಪ್ರೌಢ ಶಾಲೆಗಳಾಗಿ ಪರಿವರ್ತಿಸಲಾಗುವುದು. ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಯ ವೇತನ, ಅನುದಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಶರ್ಮಾ ಅವರು ತಿಳಿಸಿದರು. ರಾಜ್ಯದಲ್ಲಿ ಒಟ್ಟು 610 ಸರ್ಕಾರಿ ಮದರಸಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT