ನವದೆಹಲಿ:ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ ) ಅಂತಿಮ ಪಟ್ಟಿ ಆಫ್‌ಲೈನ್ ಆಗಿದೆ. ಅಂದರೆ ಎನ್‌ಆರ್‌ಸಿ ಪಟ್ಟಿ ಆನ್‌ಲೈನ್‌ನಲ್ಲಿ ಲಭ್ಯವಾಗದೇ ಇರುವುದರ ಬಗ್ಗೆಜನರು ಆತಂಕಗೊಳಗಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಯಾರಿಸಿದ ಎನ್‌ಆರ್‌ಸಿ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹಲವಾರು ವ್ಯಕ್ತಿಗಳ ಮಾಹಿತಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಆದಾಗ್ಯೂ, ಈ ಸಮಸ್ಯೆ ತಾತ್ಕಾಲಿಕ. ಕೆಲವೇ ದಿನಗಳಲ್ಲಿ ಇದನ್ನು ಸರಿಪಡಿಸಲಾಗುತ್ತದೆ ಎಂದು ಅಸ್ಸಾಂನ ಅಧಿಕಾರಿಗಳು ಹೇಳಿದ್ದಾರೆ.

ಕ್ಲೌಡ್ ಸ್ಟೋರೆಜ್ ಮಾಡಿದ್ದ ವಿಪ್ರೊ ಒಪ್ಪಂದದ ಕಾಲಾವಧಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಗಿದಿದೆ. ಕ್ಲೌಡ್ ಸ್ಟೋರೇಜ್ ಬಳಕೆ ಸ್ಥಗಿತಗೊಂಡಿದ್ದರಿಂದ ಡಿಸೆಂಬರ್ 15ರ ನಂತರ ಮಾಹಿತಿಗಳು ಆಫ್‌ಲೈನ್ ಆಗಿವೆ ಎಂದು ಎನ್‌ಆರ್‌ಸಿ ಸಂಚಾಲಕರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್‌ಆರ್‌ಸಿ ಮಾಹಿತಿ ಸುರಕ್ಷಿತವಾಗಿವೆ. ಕ್ಲೌಡ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ.ಅವುಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಗೃಹ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಮಾಹಿತಿ ಲಭ್ಯವಾಗದೇ ಇರುವ ಕಾರಣ ಜನರು ಭಯದಿಂದ ಇದ್ದರು. ಪಟ್ಟಿಯಿಂದ ಹೊರಗೆ ಉಳಿದಿರುವ ಜನರಲ್ಲಿ ಆತಂಕ ಹೆಚ್ಚು ಇದೆ.

ಈ ಮಾಹಿತಿಗಳು ಆಫ್‌ಲೈನ್ ಆಗಿದೆ . ಆದರೆ ಇದರ ಹಿಂದೆ ದುರುದ್ದೇಶವಿದೆ ಎಂಬ ಆರೋಪವನ್ನು ಎನ್‌ಆರ್‌ಸಿ ರಾಜ್ಯ ಸಂಚಾಲಕ ಹಿತೇಶ್ ದೇವ್ ಶರ್ಮಾ ತಳ್ಳಿಹಾಕಿದ್ದಾರೆ.

ಮಾಹಿತಿಗಳು ನಾಪತ್ತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜನವರಿ 30ರಂದು ಸೇರಿದ ಸಭೆಯಲ್ಲಿ ತೀರ್ಮಾನಿಸಿ ಫೆಬ್ರುವರಿ ಮೊದಲ ವಾರ ವಿಪ್ರೊಗೆ ಪತ್ರ ಬರೆಯಲಾಗಿತ್ತು.ವಿಪ್ರೊ ಈ ಮಾಹಿತಿಯನ್ನು ಲೈವ್ ಮಾಡಿದರೆ ಅದು ಸಾರ್ವಜನಿಕರಿಗೆ ಸಿಗುತ್ತದೆ. ಮುಂದಿನ ಎರಡು ಮೂರು ದಿನಗಳಲ್ಲಿ ಇದು ಸರಿ ಹೋಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಶರ್ಮಾ.

ಆಗಸ್ಟ್ 31, 2019ರಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಪ್ರಕಟವಾಗಿತ್ತು. ಈ ಪಟ್ಟಿಯನ್ನು http://www.nrcassam.nic.in ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ 19,06,657 ವ್ಯಕ್ತಿಗಳನ್ನು ಹೊರಗಿಡಲಾಗಿತ್ತು. 3,30,27,661 ಅರ್ಜಿದಾರರ ಪೈಕಿ 3,11,21,004 ಮಂದಿ ಈ ಪಟ್ಟಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.