ನವದೆಹಲಿ: ದೆಹಲಿ ವಿಧಾನಸಭೆಯಿಂದ ಎಎಪಿಯ 21 ಶಾಸಕರನ್ನು ಅಮಾನತು ಮಾಡಿರುವುದು ಜನಾದೇಶಕ್ಕೆ ಮಾಡಿದ ‘ಅವಮಾನ’ ಮತ್ತು ‘ಪ್ರಜಾಪ್ರಭುತ್ವಕ್ಕೆ ನೀಡಿದ ಏಟು’ ಎಂದು ವಿರೋಧ ಪಕ್ಷದ ನಾಯಕಿ ಅತಿಶಿ ಅವರು ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶಾಸಕರ ಅಮಾನತು ಕ್ರಮವನ್ನು ಖಂಡಿಸಿದ ಅವರು, ವಿರೋಧ ಪಕ್ಷದವರ ಧ್ವನಿಯನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಪೀಕರ್ಗೆ ಹಿಂದಿಯಲ್ಲಿ ಪತ್ರ ಬರೆದಿರುವ ಅವರು, ದೆಹಲಿ ವಿಧಾನಸಭೆಯಲ್ಲಿ ನಡೆದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಕ್ಕೆ ವಿರೋಧ ಪಕ್ಷದ ಶಾಸಕರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.

‘ಲೆಫ್ಟಿನೆಂಟ್ ಕರ್ನಲ್ ವಿ.ಕೆ.ಸಕ್ಸೇನಾ ಅವರ ಭಾಷಣದ ವೇಳೆ ಎಎಪಿ ಶಾಸಕರು ‘ಜೈ ಭೀಮ್’ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ‘ಮೋದಿ– ಮೋದಿ’ ಎಂದು ಘೋಷಣೆ ಕೂಗಿದ್ದ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸಭೆ ಕಲಾಪದಿಂದ ತಮ್ಮನ್ನು ಅಮಾನತುಗೊಳಿಸಿರುವ ಕ್ರಮವನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದ ಆತಿಶಿ ಮತ್ತು ಎಎಪಿಯ ಶಾಸಕರಿಗೆ ವಿಧಾನಸಭೆ ಆವರಣ ಪ್ರವೇಶಿಸಲು ಅವಕಾಶ ನಿರಾಕರಿಸಿ, ಪ್ರವೇಶದ್ವಾರದಲ್ಲೇ ತಡೆಯೊಡ್ಡಲಾಗಿತ್ತು.

‘ಗೌರವಾನ್ವಿತ ಸ್ಪೀಕರ್ ಅವರೇ, ನೀವು ಈ ವಿಧಾನಸಭೆಯ ಕಾವಲುಗಾರರು. ಆಡಳಿತ ಪಕ್ಷದವರೇ ಇರಲಿ ಅಥವಾ ವಿರೋಧ ಪಕ್ಷದವರೇ ಆಗಿರಲಿ, ಎಲ್ಲಾ ಶಾಸಕರನ್ನು ಸಮಾನವಾಗಿ ಕಾಣುವುದು ನಿಮ್ಮ ಕರ್ತವ್ಯ. ನೀವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಶಾಸಕರಿಗೆ ವಿಧಾನಸಭೆ ಆವರಣ ಪ್ರವೇಶಿಸಲು ಅವಕಾಶ ನೀಡದಿರುವ ಘಟನೆ ದೆಹಲಿ ವಿಧಾನಸಭೆಯಲ್ಲಿ ನಡೆದಿರುವುದು ಇದೇ ಮೊದಲು
ಆತಿಶಿ ವಿರೋಧ ಪಕ್ಷದ ನಾಯಕಿ
.ದೆಹಲಿ ವಿಧಾನಸಭೆ ಪ್ರವೇಶಕ್ಕೆ ಎಎಪಿ ಶಾಸಕರಿಗೆ ನಿರ್ಬಂಧ: ಆತಿಶಿ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.