ದೆಹಲಿಯ ಪ್ರತಿಷ್ಠಿತ ಸ್ಟ್ರೀಟ್ ಫುಡ್ ಬೀದಿಗೆ ತೆರಳಿದ ರಿಚರ್ಡ್, ಅಲ್ಲಿ ಸಿಗುವ ತರಹೇವಾರಿ ತಿನಿಸುಗಳ ಬಗ್ಗೆ ಮಾಹಿತಿ ಪಡೆದರು. ಅಂತಿಮವಾಗಿ ರಾಮ್ ಲಡ್ಡು ತಿನ್ನುವ ಇಂಗಿತ ವ್ಯಕ್ತಪಡಿಸಿದರು. ಪುಟ್ಟ ದೊನ್ನೆಯಲ್ಲಿ ಕೊಡುವ ರಾಮ್ ಲಾಡುವನ್ನು ವಿಶೇಷವಾಗಿ ಸವಿದರು. ಲಿಂಬು ರಸ ಕುಡಿದ ಅವರು ನಂತರ ಯುಪಿಐ ಮೂಲಕ ಸರಳ ಪಾವತಿಯನ್ನು ವೀಕ್ಷಿಸಿದರು. ಇವರೊಂದಿಗೆ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಇದ್ದರು.
ಇದಕ್ಕಾಗಿ ಅವರು ಪಾವತಿ ಕುರಿತು ಪ್ರಶ್ನಿಸಿದಾಗ, ಪಕ್ಕದಲ್ಲಿದ್ದ ನೌಕಾ ಸೇನಾ ಅಧಿಕಾರಿಯೊಬ್ಬರು ತಮ್ಮ ಮೊಬೈಲ್ ಹಿಡಿದು ಸ್ಕ್ಯಾನ್ ಮಾಡುವ ಮೂಲಕ ಸರಳವಾಗಿ ಪಾವತಿಸುವ ವಿಧಾನವನ್ನು ತೋರಿಸಿದರು. ಅಷ್ಟೂ ಪ್ರಕ್ರಿಯೆಯನ್ನು ರಿಚರ್ಡ್ ಬೆರಗಿನಿಂದ ವೀಕ್ಷಿಸಿದರು.