ಚಂಡಿಗಡ: ಕಳೆದ 12 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡಿದ್ದ ಬಬ್ಬರ್ ಖಲ್ಸಾ ಉಗ್ರನನ್ನು ವಶಕ್ಕೆ ಪಡೆಯುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಹಾಲಿಯ ಡೇರಾ ಬಸ್ಸಾಯಲ್ಲಿದ್ದಚರಣ್‌ಜಿತ್ ಸಿಂಗ್ ಅಲಿಯಾಸ್ ಪಟಿಯಲಾವಿಯನ್ನುಪಂಜಾಬ್ ಪೊಲೀಸ್ ಇಲಾಖೆಯ ಸುಲಿಗೆ ನಿಗ್ರಹ ಕಾರ್ಯಪಡೆ ಭಾನುವಾರ ಬಂಧಿಸಿದೆ.

ಲೂಧಿಯಾನದ ಶಿಂಗಾರ್ ಸಿನಿಮಾ ಬಾಂಬ್ ಸ್ಫೋಟ ಹಾಗೂ ಇನ್ನಿತರ ಪ್ರಕರಣಗಳ ಸಂಬಂಧ ಈ ಉಗ್ರ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ.ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್(ಬಿಕೆಇ) ಉಗ್ರ ಸಂಘಟನೆಯಲ್ಲಿ ಈತ ಸಕ್ರಿಯ ಸದಸ್ಯನಾಗಿದ್ದ. 6 ಜನರ ಸಾವಿಗೆ ಕಾರಣವಾದ 2007ರ ಲೂಧಿಯಾನ ಸ್ಫೋಟ ಪ್ರಕರಣದಲ್ಲಿ ಇದೇ ಸಂಘಟನೆ ಭಾಗಿಯಾಗಿತ್ತು.

ಈ ಪ್ರಕರಣದಲ್ಲಿ ಪಟಿಯಲಾವಿಯ ಜೊತೆಗಿದ್ದ ಎಲ್ಲರನ್ನೂ 2010ರಲ್ಲೇ ಬಂಧಿಸಲಾಗಿತ್ತು. ಆದರೆ ಈತ ಮಾತ್ರ ವಿವಿಧ ವೇಷಗಳನ್ನು ಬದಲಿಸಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡಿದ್ದ. ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿರುವ ಗುರುದ್ವಾರದಲ್ಲಿದ್ದ ಈತ ಯಾವ ಸಂವಹನ ಸಾಧನವನ್ನೂ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.