ಬದರಿನಾಥ: ಕೊರೊನಾ ಸಾಂಕ್ರಾಮಿಕದಿಂದ ಮುಚ್ಚಲ್ಪಟ್ಟಿದ್ದ ಬದರಿನಾಥ್ ದೇವಸ್ಥಾನವು ಭಾನುವಾರಭಕ್ತರಿಗಾಗಿ ಸಾಂಪ್ರದಾಯಿಕ ಆಚರಣೆಗಳು ಹಾಗೂ ವೇದ ಸ್ತೋತ್ರಗಳ ಪಠಣದೊಂದಿಗೆ ಪುನಃ ಆರಂಭವಾಗಿದೆ.

ದೇಶ, ವಿದೇಶದಿಂದ ಬಂದ ಸಾವಿರಾರು ಭಕ್ತರು ಶ್ರೀ ವಿಷ್ಣುವಿನ ದೇವಸ್ಥಾನದ ಪುನರಾರಂಭದ ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು. ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಧಾರ್ಮಿಕ ವಿಧವಿಧಾನಗಳನ್ನು ನೆರವೇರಿಸಿದರು.

ಇದರೊಂದಿಗೆ ಚಾರ್ ಧಾಮ್ನ ಯಾತ್ರೆಯು ಸಂಪೂರ್ಣವಾಗಿ ಆರಂಭವಾಗಿದೆ. ಮೇ 3ರಂದು ಗಂಗೋತ್ರಿ ಹಾಗೂ ಯಮುನೋತ್ರಿ ಆರಂಭವಾಗಿದ್ದವು. ಮೇ 6ರಂದು ಕೇದಾರನಾಥ ದೇಗುಲಕ್ಕೆ ಪ್ರವೇಶ ಪ್ರಾರಂಭವಾಗಿತ್ತು.

ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ಚಾರ್ಧಾಮ್ ಯಾತ್ರೆಯು ನಿಂತು ಹೋಗಿತ್ತು. ನಂತರದಲ್ಲಿ ಚಾರ್ಧಾಮ್ ಯಾತ್ರೆ ಮತ್ತೆ ಆರಂಭವಾದರೂ, ಕೋವಿಡ್ ನಿಯಮಗಳಿಂದ ಯಾತ್ರಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. ಇದೀಗ ಯಾವುದೇ ನಿರ್ಬಂಧವಿಲ್ಲದೆ, ಯಾತ್ರಾರ್ಥಿಗಳು ಚಾರ್ಧಾಮ್ ಯಾತ್ರೆ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.