ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂದೆ ಸರ್ಕಾರದ ಜಾಹೀರಾತಿನಲ್ಲಿ ಭಾವಚಿತ್ರ ಸಮರ

Published 14 ಜೂನ್ 2023, 17:46 IST
Last Updated 14 ಜೂನ್ 2023, 17:46 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪಕ್ಷದ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್‌ ಠಾಕ್ರೆ ಅವರ ಚಿತ್ರ ಆಡಳಿತಾರೂಢ ಮೈತ್ರಿಕೂಟ ಸರ್ಕಾರದ ಜಾಹೀರಾತಿನಲ್ಲಿ ಇಲ್ಲದ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ‘ದೆಹಲಿಯ ಗುಲಾಮ’ ಎಂದು ಬುಧವಾರ ಶಿವಸೇನಾ (ಠಾಕ್ರೆ ಬಣ) ಟೀಕಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಯದಿಂದಾಗಿ ಬಾಳಾ ಠಾಕ್ರೆ ಅವರ ಚಿತ್ರ ಕಾಣೆಯಾಗಿದೆ ಎಂದು ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.

ಮಂಗಳವಾರ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಪೂರ್ಣ ಪುಟದ ಜಾಹೀರಾತಿನಲ್ಲಿ ಜನಪ್ರಿಯತೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗಿಂತ ಶಿಂಧೆ ಮುಂದಿದ್ದಾರೆ ಎಂದು ಸಮೀಕ್ಷೆಯನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಫಡಣವೀಸ್ ಅವರ ಫೋಟೋ ಇರಲಿಲ್ಲ. ಆದರೆ, ಅದರ ಟ್ಯಾಗ್‌ಲೈನ್‌ ‘ದೇಶದಲ್ಲಿ ಮೋದಿ, ಮಹಾರಾಷ್ಟ್ರದಲ್ಲಿ ಶಿಂಧೆ’ ಎಂದು ಬರೆಯಲಾಗಿತ್ತು. 

‘ಬಾಳಾ ಠಾಕ್ರೆ ಅವರನ್ನು ನಿರ್ಲಕ್ಷಿಸುವುದರ ಹಿಂದಿನ ಉದ್ದೇಶವೇನು?. ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುವವರು ತಮ್ಮ ಬಣವನ್ನು ಮೋದಿ ಅವರ ಪಾದದ ಬಳಿ ಇರಿಸಿದ್ದಾರೆ’ ಎಂದು  ಸಂಪಾದಕೀಯ ಹೇಳಿದೆ.

ಈ ನಡುವೆ  ಏಕನಾಥ್ ಶಿಂದೆ ಮತ್ತು ನರೇಂದ್ರ ಮೋದಿ ಅವರ ಭಾವಚಿತ್ರ ಹೊಂದಿರುವ ಜಾಹೀರಾತು ಚರ್ಚೆಯ ವಿಷಯವಾದ ಒಂದು ದಿನದ ನಂತರ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಒಳಗೊಂಡ ಭಾವಚಿತ್ರ ಮೈತ್ರಿಕೂಟದ ಜಾಹೀರಾತು ಬುಧವಾರ ಮರಾಠಿ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡಿತು.

ಜನಪ್ರಿಯತೆಯಲ್ಲಿ ಮುಖ್ಯಮಂತ್ರಿ ಶಿಂದೆ ಮುಂದಿದ್ದಾರೆ ಎಂದು ಸಮೀಕ್ಷೆ  ಉಲ್ಲೇಖಿಸಿ ಮಂಗಳವಾರ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತು ಪ‍್ರಕಟವಾಗಿತ್ತು. ಅದರಲ್ಲಿ ಫಡಣವೀಸ್ ಅಥವಾ ಬಾಳಾ ಠಾಕ್ರೆ ಅವರ ಚಿತ್ರಗಳು ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT