ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗೆ ₹8100 ಕೋಟಿ ವಂಚನೆ: ಎಸ್‌ಬಿಎಲ್‌ನ ನಾಲ್ವರು ನಿರ್ದೇಶಕರು ಅಪರಾಧಿಗಳು

ದೆಹಲಿ ನ್ಯಾಯಾಲಯ ತೀರ್ಪು
Last Updated 28 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ನವದೆಹಲಿ: ಆಂಧ್ರ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ₹8,100 ಕೋಟಿ ವಂಚಿಸಿದ ಪ್ರಕರಣದಲ್ಲಿ ಗುಜರಾತ್‌ ಮೂಲದ ಫಾರ್ಮಾ ಕಂಪನಿ ಸ್ಟರ್ಲಿಂಗ್‌ ಬಯೋಟೆಕ್‌ನ(ಎಸ್‌ಬಿಎಲ್‌) ನಾಲ್ವರು ನಿರ್ದೇಶಕರನ್ನು ‘ಪರಾರಿಯಾಗಿರುವ ಅಪರಾಧಿಗಳು’ ಎಂದು ದೆಹಲಿ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ.

ಜಾರಿ ನಿರ್ದೇಶನಾಲಯ(ಇ.ಡಿ) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ, ಈ ತೀರ್ಪು ಪ್ರಕಟಿಸಿದ್ದಾರೆ.

‘ಆರೋಪಿಗಳಾದ ನಿತಿನ್‌ ಜಯಂತಿಲಾಲ್‌ ಸಂದೇಸ್ರ, ಚೇತನ್ ಜಯಂತಿಲಾಲ್‌ ಸಂದೇಸ್ರ, ದೀಪ್ತಿಜಯಂತಿಲಾಲ್‌ ಸಂದೇಸ್ರ ಹಾಗೂ ಹಿತೇಶ್‌ ಕುಮಾರ್‌ ನರೇಂದ್ರಭಾಯಿ ಪಟೇಲ್‌ ಅವರು ಆರ್ಥಿಕ ಅಪರಾಧಿಗಳು’ ಎಂದು ಘೋಷಿಸಿದ್ದಾರೆ.

ಇವರೆಲ್ಲರೂ ದೇಶದಿಂದ ಪರಾರಿಯಾಗಿದ್ದಾರೆ ಎಂದು ಇ.ಡಿ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್.ವಿ.ರಾಜು ನ್ಯಾಯಾಲಯದ ಗಮನಕ್ಕೆ ತಂದರು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಲು ಮನವಿ ಮಾಡಲಾಗಿತ್ತು. ಅಪರಾಧಿಗಳು ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಮರುಪಾವತಿಸಿರಲಿಲ್ಲ ಎಂದು ಇ.ಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT