ನವದೆಹಲಿ: ವಾರಕ್ಕೆ ಐದು ದಿನಗಳ ಕಾಲ ಕೆಲಸದ ನೀತಿ ಜಾರಿಗೊಳಿಸಬೇಕೆಂಬ ದೀರ್ಘಕಾಲದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟವು (ಯುಎಫ್ಬಿಯು) ಇದೇ ಜನವರಿ 27ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಒಂದೊಮ್ಮೆ ಪ್ರತಿಭಟನೆ ನಡೆದರೆ, ಸತತ ಮೂರು ದಿನಗಳ ಕಾಲ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 25 (ಭಾನುವಾರ), 26 ಗಣರಾಜ್ಯ ದಿನವಿದೆ. ಒಂದೊಮ್ಮೆ ಪ್ರತಿಭಟನೆ ನಡೆದರೆ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬ್ಯಾಂಕ್ ಸಿಬ್ಬಂದಿಯು ಗ್ರಾಹಕರಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ.

‘ಪ್ರತಿಭಟನೆಯ ನೋಟಿಸ್ ನೀಡಿದ ಬೆನ್ನಲ್ಲೇ, ಕಾರ್ಮಿಕ ಇಲಾಖೆಯ ಮುಖ್ಯ ಆಯುಕ್ತರು ಬುಧವಾರ ಹಾಗೂ ಗುರುವಾರ ರಾಜಿ ಪ್ರಕ್ರಿಯೆ ಸಭೆ ನಡೆಸಿದ್ದಾರೆ. ಆದರೆ ಧನಾತ್ಮಕವಾದ ಫಲಿತಾಂಶ ಹೊರಬಂದಿಲ್ಲ’ ಎಂದು ಬ್ಯಾಂಕ್ ಅಧಿಕಾರಿಗಳು ಹಾಗೂ ಕಾರ್ಮಿಕರ 9 ಸಂಘಟನೆಗಳ ಒಕ್ಕೂಟವಾದ ಯುಎಫ್ಬಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಬ್ಯಾಂಕ್ ನೌಕರರಿಗೆ ಭಾನುವಾರ ಹೊರತುಪಡಿಸಿ ತಿಂಗಳ ಎರಡು ಹಾಗೂ ನಾಲ್ಕನೇ ಶನಿವಾರ ರಜೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.