ನವದೆಹಲಿ: ‘ಕ್ರೆಡಿಟ್ ಕಾರ್ಡ್ನ ಬಾಕಿಗಳ ಮೇಲೆ ಬ್ಯಾಂಕುಗಳು ಶೇ 30ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಹುದು. ಇಂತಿಷ್ಟೇ ಬಡ್ಡಿ ವಿಧಿಸಬೇಕು ಎಂದು ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

‘ವರ್ಷಕ್ಕೆ ಶೇ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು. ಹಾಗೆ ಮಾಡುವುದು ಗ್ರಾಹಕರ ಶೋಷಣೆಯಾಗುತ್ತದೆ’ ಎಂದು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (ಎನ್ಸಿಡಿಆರ್ಸಿ) 16 ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.

‘ಎನ್ಸಿಡಿಆರ್ಸಿ ನೀಡಿದ್ದ ತೀರ್ಪು, ಆರ್ಬಿಐ ಅಧಿಕಾರದಲ್ಲಿ ಮೂಗು ತೂರಿಸಿದಂತಾಗುತ್ತಿತ್ತು. ಜೊತೆಗೆ ಬ್ಯಾಂಕು ಹಾಗೂ ಗ್ರಾಹಕರ ಮಧ್ಯೆ ನಡೆದಿರುವ ಒಪ್ಪಂದದ ಕರಾರುಗಳನ್ನು ಬದಲಿಸಲು ಎನ್ಸಿಡಿಆರ್ಸಿಗೆ ಅಧಿಕಾರವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಹೇಳಿದೆ.

‘ಬಡ್ಡಿ ಹಾಕುವುದು ಸೇರಿದಂತೆ ಎಲ್ಲ ಮಾಹಿತಿಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕಾಲ ಕಾಲಕ್ಕೆ ಮನದಟ್ಟು ಮಾಡಿರುತ್ತವೆ. ದೇಶದ ಯಾವ ಬ್ಯಾಂಕ್ ಕೂಡ ಆರ್ಬಿಐ ಸೂಚನೆಯನ್ನು ಇಲ್ಲಿಯವರೆಗೂ ಮೀರಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಎನ್ಸಿಡಿಆರ್ಸಿ ನೀಡಿದ್ದ ಆದೇಶದ ವಿರುದ್ಧ 2008ರ ಜುಲೈನಲ್ಲಿ ಸಿಟಿಬ್ಯಾಂಕ್, ಅಮೆರಿಕನ್ ಎಕ್ಸ್ಪ್ರೆಸ್, ಎಚ್ಎಸ್ಬಿಸಿ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗಳು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದವು. ಡಿ.20ಕ್ಕೆ ನ್ಯಾಯಾಲಯವು ತೀರ್ಪು ನೀಡಿದೆ.

ವಿದ್ಯಾವಂತರೇ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಮಾಡಬೇಕು ಎಂದು ಅವರಿಗೆ ತಿಳಿದಿರುತ್ತದೆ
ಸುಪ್ರೀಂ ಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.