ಬೆಂಗಳೂರು: ಸೆಮಿಫೈನಲ್ನಲ್ಲಿ ಸೋತ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳು ರಾಷ್ಟ್ರೀಯ ಜೂನಿಯರ್ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗಳಿಸಿದವು.
ಪಂಜಾಬ್ನಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಬುಧವಾರ ಕರ್ನಾಟಕದ ಬಾಲಕರು ಹರಿಯಾಣಕ್ಕೆ 37–41ರಿಂದ ಮಣಿದರು. ಕರ್ನಾಟಕ ಮತ್ತು ದೆಹಲಿ ತಂಡಗಳು ಕಂಚಿನ ಪದಕ ಹಂಚಿಕೊಂಡವು.
ಬಾಲಕಿಯರ ವಿಭಾಗದಲ್ಲೂ ಕರ್ನಾಟಕ ತಂಡ ಹರಿಯಾಣ ಎದುರು ಸೋತಿತು. ಉತ್ತಮ ಪೈಪೋಟಿ ನೀಡಿದ ತಂಡ ಮೂರು ಪಾಯಿಂಟ್ಗಳಿಂದ (34–37) ಸೋಲೊಪ್ಪಿಕೊಂಡಿತು. ಉತ್ತರ ಪ್ರದೇಶವೂ ಮೂರನೇ ಸ್ಥಾನ ಗಳಿಸಿತು.