ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MCDಗೆ ಹಿರಿಯ ಸದಸ್ಯರನ್ನು ನೇಮಿಸುವ ಅಧಿಕಾರ LGಗೆ ಇದೆ: ಸುಪ್ರೀಂ ಕೋರ್ಟ್

Published 5 ಆಗಸ್ಟ್ 2024, 7:08 IST
Last Updated 5 ಆಗಸ್ಟ್ 2024, 7:08 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) 10 ಮಂದಿ ನಾಮನಿರ್ದೇಶಿತ ಸದಸ್ಯರ ನೇಮಕ ಮಾಡಲು ಲೆಫ್ಟಿನಂಟ್‌ ಗವರ್ನರ್‌ (ಎಲ್‌ಜಿ) ಅವರಿಗಿರುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ. 

ಸಚಿವ ಸಂಪುಟದ ಸಲಹೆ, ಸೂಚನೆ ಪಡೆಯದೇ ಸದಸ್ಯರನ್ನು ನೇಮಿಸುವ ಎಲ್‌ಜಿ ಅವರ ಅಧಿಕಾರವನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿ ಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ನ್ಯಾಯಪೀಠ ತಿರಸ್ಕರಿಸಿತು. 

ದೆಹಲಿ ಮಹಾನಗರ ಪಾಲಿಕೆ ಕಾಯ್ದೆಗೆ 1993ರಲ್ಲಿ ತಿದ್ದುಪಡಿ ತಂದ ವೇಳೆ, ವಿಶೇಷ ಕ್ಷೇತ್ರಗಳಲ್ಲಿ ಜ್ಞಾನವಿರುವ ವ್ಯಕ್ತಿಗಳನ್ನು ಪಾಲಿಕೆಯ ಸದಸ್ಯರನ್ನಾಗಿ ನೇಮಿಸುವ ಅಧಿಕಾರವನ್ನು ಎಲ್‌ಜಿ ಅವರಿಗೆ ನೀಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸಕ್ಸೆನಾ ನಡುವಿನ ಸಂಬಂಧ ಸರಿಯಿಲ್ಲದ ಈ ಹೊತ್ತಿನಲ್ಲಿ ಈ ತೀರ್ಪು ಹೊರ ಬಿದ್ದಿರುವುದರಿಂದ ಎಎಪಿಗೆ ಹಿನ್ನಡೆಯಾದಂತಾಗಿದೆ. 

ಈ ತೀರ್ಪ‌ನ್ನು ಸುಪ್ರೀಂ ಕೋರ್ಟ್‌ ಸುಮಾರು 15 ತಿಂಗಳು ಕಾಯ್ದಿರಿಸಿತ್ತು.

ಎಂಸಿಡಿ ಸದಸ್ಯರನ್ನು ನೇಮಿಸಲು ಎಲ್‌ಜಿ ಅವರಿಗಿರುವ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ‘ಗೌರವ ಪೂರ್ವಕವಾಗಿ ನಿರಾಕರಿ ಸುತ್ತೇವೆ’ ಎಎಪಿ ಹೇಳಿದೆ. ಈ ತೀರ್ಪು ‘ಭಾರತದ ಪ್ರಜಾಪ್ರಭುತ್ವಕ್ಕೆ ನೀಡಿದ ಪೆಟ್ಟು’ ಎಂದು ಬಣ್ಣಿಸಿದೆ. ಈ ತೀರ್ಪು ಚುನಾಯಿತ ಸರ್ಕಾರವನ್ನು ಕಡೆಗಣಿಸಲು ಎಲ್‌ಜಿ ಅವರಿಗೆ ಅಧಿಕಾರ ಕೊಟ್ಟಂತಿದೆ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಹೇಳಿದ್ದಾರೆ. 

‘ಎಲ್‌ಜಿ ವಿ.ಕೆ. ಸಕ್ಸೇನಾ ಏನೇ ಮಾಡಿದರೂ ಅದನ್ನು ಪ್ರಶ್ನಿಸುವ ಚಟವನ್ನು ಎಎಪಿ ಬೆಳೆಸಿಕೊಂಡಿದೆ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT