ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ: ಶೇ 63ರಷ್ಟು ಒಬಿಸಿ, ಇಬಿಸಿ

Published 2 ಅಕ್ಟೋಬರ್ 2023, 9:44 IST
Last Updated 2 ಅಕ್ಟೋಬರ್ 2023, 9:44 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಸರ್ಕಾರವು ನಡೆಸಿದ್ದ ಜಾತಿವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಜನರು ಶೇಕಡ 63ರಷ್ಟು ಇದ್ದಾರೆ.

ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಜನರು ಶೇಕಡ 27.13ರಷ್ಟು, ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಜನರು ಶೇಕಡ 36.01ರಷ್ಟಿದ್ದರೆ, ಸಾಮಾನ್ಯ ವರ್ಗದ ಜನರು ಶೇಕಡ 15.52ರಷ್ಟಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಬಿಹಾರದಲ್ಲಿ 13.07 ಕೋಟಿ ಜನಸಂಖ್ಯೆ ಇದೆ ಎಂದು ಈ ಸಮೀಕ್ಷೆಯ ವರದಿ ತಿಳಿಸಿದೆ.

ಒಬಿಸಿಯಲ್ಲಿ ಬರುವ ಯಾದವ ಸಮುದಾಯದ ಜನಸಂಖ್ಯೆ ಅತಿ ಹೆಚ್ಚಾಗಿದ್ದು, ಒಟ್ಟು ಶೇಕಡ 14.27ರಷ್ಟು ಯಾದವ ಸಮುದಾಯದ ಜನರು ಬಿಹಾರದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಗಮನಾರ್ಹವೆಂದರೆ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿ ಹೊರತುಪಡಿಸಿ ಇತರೆ ಜಾತಿಗಳ ಎಣಿಕೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರ ಸರ್ಕಾರವು ಜಾತಿವಾರು ಸಮೀಕ್ಷೆಗೆ ಆದೇಶಿಸಿತ್ತು.

ಬಿಹಾರದ ಜಾತಿವಾರು ಜನಸಂಖ್ಯೆ ಸಮೀಕ್ಷೆ
ಬಿಹಾರದ ಒಟ್ಟು ಜನಸಂಖ್ಯೆ: 13,07,25,310 ಒಬಿಸಿ: 3.54 ಕೋಟಿ -- 27.12% ಇಬಿಸಿ: 4.70 ಕೋಟಿ -- 36.01% ಎಸ್‌ಸಿ: 2.56 ಕೋಟಿ-- 19.65% ಎಸ್‌ಟಿ: 21.99 ಲಕ್ಷ -- 1,68% ಸಾಮಾನ್ಯ ವರ್ಗ: 2.02 ಕೋಟಿ -- 15.52%
ಧರ್ಮವಾರು ಜನಸಂಖ್ಯೆ
ಹಿಂದೂ: 10.71 ಕೋಟಿ -- 81.99% ಇಸ್ಲಾಂ: 23.14 ಲಕ್ಷ -- 17.70% ಕ್ರಿಶ್ಚಿಯನ್: 75238 -- 0.05% ಸಿಖ್: 14753 -- 0.01% ಬೌದ್ಧರು: 1.11 ಲಕ್ಷ -- 0.08% ಜೈನ್: 12523 -- 0.009% ಇತರೆ: 1.66 ಕೋಟಿ -- 0.12%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT