ಜೈಪುರ್: ದೇಶವನ್ನು ಬೆಚ್ಚಿ ಬೀಳಿಸಿರುವ ಮುಂಬೈ ಮೂಲದ ಯುವತಿ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಬಗ್ಗೆ ರಾಜಸ್ಥಾನಮುಖ್ಯಮಂತ್ರಿ ಅಶೋಕ್ ಗೆಹಲೋತ್ ನೀಡಿದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಮಾಧ್ಯಮಗಳೊಂದಿಗೆ ಶ್ರದ್ಧಾ ಪ್ರಕರಣದ ಬಗ್ಗೆ ಮಾತನಾಡಿದ್ದ ಗೆಹಲೋತ್ ಅವರು, ‘ಶ್ರದ್ಧಾ ಕೊಲೆ ಪ್ರಕರಣ ಕೇವಲ ಆಕಸ್ಮಿಕ ಅಷ್ಟೇ. ಅದನ್ನು ಒಂದು ಆಕಸ್ಮಿಕ ಎಂಬಂತೆನೋಡಬೇಕಷ್ಟೇ’ ಎಂದಿದ್ದರು.

ಮುಂದುವರೆದು, ‘ಬಹಳ ಕಾಲದಿಂದಲೂ ಅನ್ಯ ಜಾತಿ ವಿವಾಹ, ಅನ್ಯ ಧರ್ಮೀಯವಿಹಾಹಗಳು ನಡೆದಿವೆ. ಕೊಲೆಗಳು ನಡೆದಿವೆ. ಇದರಲ್ಲಿ ಏನೂ ಹೊಸದು ಇಲ್ಲ’ ಎಂದಿದ್ದರು.

‘ಇಂತಹ ಘಟನೆಗಳನ್ನು ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ರಾಜಕೀಯ ಮಾಡುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಸುಲಭ. ಒಂದು ಕಟ್ಟಡ ಕಟ್ಟುವುದು ಕಷ್ಟ ಇದೆ. ಆದರೆ, ಅದನ್ನೇ ಕ್ಷಣಾರ್ಧದಲ್ಲಿ ಉರುಳಿಸಬಹುದು. ಬಿಜೆಪಿ ಉರುಳಿಸುವ ಕೆಲಸ ಮಾಡುತ್ತಿದೆ’ ಎಂದು ಅವರು ಗೆಹಲೋತ್ ಆರೋಪಿಸಿದ್ದರು.

ಈ ಬಗ್ಗೆ ಗೆಹಲೋತ್ ಅವರನ್ನು ಟೀಕಿಸಿ ಮಾತನಾಡಿರುವ ರಾಜಸ್ಥಾನದಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರು, ‘ಅತ್ಯಂತ ಭಯಾನಕ ಸಂಗತಿಯನ್ನು ಸಾಮಾನ್ನೀಕರಣಗೊಳಿಸುವ ಮುಖ್ಯಮಂತ್ರಿ ಗೆಹಲೋತ್ ಅವರ ಹೇಳಿಕೆಯಲ್ಲಿ ಯಾವುದೇ ತರ್ಕವಿಲ್ಲ. ಅದೊಂದು ಮೂರ್ಖತನದ ಹೇಳಿಕೆ’ ಎಂದಿದ್ದಾರೆ.

‘ಶ್ರದ್ಧಾ ಪ್ರಕರಣ ಲವ್ ಜಿಹಾದ್ನಿಂದ ಆಗಿದ್ದು. ಇಂತಹ ಪ್ರಕರಣಗಳು ರಾಜಸ್ತಾನದಲ್ಲೂ ನಡೆಯುತ್ತಿವೆ. ಆದರೆ, ಸಿಎಂ ಅದರ ಬಗ್ಗೆ ಸ್ವಲ್ಪನೂ ಮಾತನಾಡುವುದಿಲ್ಲ. ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿಯಿಂದ ಕೂಡಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದಿದ್ದಾರೆ.

ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ 26 ವರ್ಷದ ಶೃದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಚೆಲ್ಲಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪೂನವಾಲ ಪ್ರೇಯಸಿ ಶ್ರದ್ಧಾ ವಾಲ್ಕರ್ ಅವರಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಬಿಡಿ ಬಿಡಿಯಾಗಿ ಎಸೆದಿದ್ದ.

ಬೆದರಿಕೆ ಒಡ್ಡಿದರಾ ಕಾಮಿಡಿ ಕಿಲಾಡಿ ನಯನಾ? ಠಾಣೆ ಮೆಟ್ಟಿಲೇರಿದ ಹಾಸ್ಯ ಕಲಾವಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.